Home » Kasaragod: ಕಾಸರಗೋಡು: ಎಟಿಎಂ ದರೋಡೆಗೆ ವಿಫಲ ಯತ್ನ; ಆರೋಪಿ ಅರೆಸ್ಟ್!

Kasaragod: ಕಾಸರಗೋಡು: ಎಟಿಎಂ ದರೋಡೆಗೆ ವಿಫಲ ಯತ್ನ; ಆರೋಪಿ ಅರೆಸ್ಟ್!

0 comments

Kasaragod: ನಗರದಲ್ಲಿ (Kasaragod) ಎಟಿಎಂ ದರೋಡೆಗೆ ವಿಫಲ ಯತ್ನ ನಡೆದಿದ್ದು, ಆರೋಪಿಯನ್ನು ಗಂಟೆಗಳ ಅವಧಿಯಲ್ಲಿ ಪೊಲೀಸರು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಬೇಕಲದ ಸಫ್ಘಾನ್ (19) ಎಂದು ಗುರುತಿಸಲಾಗಿದೆ.
ಆರೋಪಿಯು ನಗರದ ಎಂ.ಜಿ ರಸ್ತೆಯ ಬ್ಯಾಂಕೊಂದರ ಎಟಿಎಂ ದರೋಡೆ ಮಾಡಲು ಸೋಮವಾರ ಮುಂಜಾನೆ ಯತ್ನಿಸಿದ್ದಾನೆ. ಮಂಗಳವಾರ ಬ್ಯಾಂಕ್ ಬಾಗಿಲು ತೆರೆಯಲು ಬಂದಾಗ ದರೋಡೆ ಯತ್ನ ಬೆಳಕಿಗೆ ಬಂದಿದೆ.

ಮಂಗಳವಾರ ಸಂಜೆ ಕಾಸರಗೋಡು ಹಳೆ ಬಸ್ಸು ನಿಲ್ದಾಣ ಪರಿಸರದ ಅಂಗಡಿ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಳವು ಮಾಡಲಾಗಿತ್ತು. ಈ ಬೈಕ್‌ನ್ನು ಕಳವು ಮಾಡಿದ್ದು, ಇದೇ ಯುವಕ ಎಂದು ಬ್ಯಾಂಕ್‌ನ ಮ್ಯಾನೇಜರ್ ಕಾಸರಗೋಡು ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದರು. ಈ ಬಗ್ಗೆ ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಬಂದಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಎಟಿಎಂ ದರೋಡೆ ಪ್ರಕರಣದಲ್ಲಿ ಈತ ಶಾಮೀಲಾಗಿರುವುದು ತಿಳಿದು ಬಂದಿದೆ. ಕಳವು ಗೈದ ಬೈಕನ್ನು ವಶಪಡಿಸಿಕೊಂಡಿದ್ದಾರೆ.

You may also like