Alahabad Court : ಪ್ರೀತಿಸಿ ಅಥವಾ ಇನ್ನಾವುದೋ ಕಾರಣದಿಂದ ಪೋಷಕರ ವಿರುದ್ಧವಾಗಿ, ಅವರ ಒಪ್ಪಿಗೆ ಇಲ್ಲದೆ ಮದುವೆಯಾಗುವಂತಹ ಜೋಡಿಗಳಿಗೆ ಇನ್ನು ಮುಂದೆ ಪೊಲೀಸ ರಕ್ಷಣೆ ನೀಡುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ಬಂದನ್ನು ನೀಡಿದೆ.
ಹೌದು, ತನ್ನ ವಿಭಿನ್ನವಾದ ತೀರ್ಪುಗಳ ಮುಖಾಂತರ ದೇಶಾದ್ಯಂತ ಸುದ್ದಿಯಾಗಿರುವ ಅಲಹಾಬಾದ್ ಹೈಕೋರ್ಟ್ ಇದೀಗ ಮತ್ತೊಂದು ಮಹತ್ವದ ತೀರ್ಪನ್ನು ಹೊರಡಿಸಿದೆ. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವ ದಂಪತಿಗಳು ತಮ್ಮ ಜೀವನ ಮತ್ತು ಸ್ವಾತಂತ್ರ್ಯಕ್ಕೆ ನಿಜವಾದ ಬೆದರಿಕೆಯ ಗ್ರಹಿಕೆ ಇಲ್ಲದಿದ್ದರೆ ಪೊಲೀಸ್ ರಕ್ಷಣೆಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪೊಲೀಸ್ ರಕ್ಷಣೆ ಮತ್ತು ತಮ್ಮ ಶಾಂತಿಯುತ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡದಂತೆ ತಮ್ಮನ್ನು ವಿರೋಧಿಸುವ ಸಂಬಂಧಿಕರಿಗೆ ನೀಡುವಂತೆ ಕೋರಿ ಶ್ರೇಯಾ ಕೇಸರ್ವಾನಿ ಮತ್ತು ಅವರ ಪತಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ನ್ಯಾಯಾಲಯವು ದಂಪತಿಗಳಿಗೆ ಭದ್ರತೆಯನ್ನು ಒದಗಿಸಬಹುದು ಆದರೆ ಯಾವುದೇ ಬೆದರಿಕೆ ಗ್ರಹಿಕೆಯ ಅನುಪಸ್ಥಿತಿಯಲ್ಲಿ, ಅಂತಹ ದಂಪತಿಗಳು ಪರಸ್ಪರ ಬೆಂಬಲಿಸಲು ಮತ್ತು ಸಮಾಜವನ್ನು ಎದುರಿಸಲು ಕಲಿಯಬೇಕು ಎಂದು ಕೋರ್ಟ್ ಹೇಳಿದೆ.
