Home » Dileep Ghosh: 60ನೇ ವರ್ಷದಲ್ಲಿ ಹಸೆಮಣೆ ಏರಿದ ಬಿಜೆಪಿ ನಾಯಕ ದಿಲೀಪ್‌ ಘೋಷ್‌ – ವಧು ಕೂಡ ಬಿಜೆಪಿ ನಾಯಕಿ

Dileep Ghosh: 60ನೇ ವರ್ಷದಲ್ಲಿ ಹಸೆಮಣೆ ಏರಿದ ಬಿಜೆಪಿ ನಾಯಕ ದಿಲೀಪ್‌ ಘೋಷ್‌ – ವಧು ಕೂಡ ಬಿಜೆಪಿ ನಾಯಕಿ

0 comments

 

Dileep Ghosh: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ಅವರು ತಮ್ಮ 60ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಿಜೆಪಿ ನಾಯಕಿ ರಿಂಕು ಮಜುಂದಾರ್‌ (Rinku Majumdar) ಅವರನ್ನು ಏಪ್ರಿಲ್ 18ರಂದು ಸರಳವಾಗಿ ವಿವಾಹವಾಗಿದ್ದಾರೆ.

 

ಹೌದು, ಪಶ್ಚಿಮ ಬಂಗಾಳದ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು 18ರ ಸಂಜೆ ಕೋಲ್ಕತಾದ ನ್ಯೂ ಟೌನ್‌ನ ತಮ್ಮ ನಿವಾಸದಲ್ಲಿ ʼವೇದಿಕ್‌ʼ ಆಚರಣೆಯ ಮೂಲಕ ಸರಳವಾಗಿ ಹಸೆಮಣೆ ಏರಿದ್ದಾರೆ. 60 ವರ್ಷದ ಬಿಜೆಪಿ ನಾಯಕನ ಮದುವೆ ಇದೀಗ ದೇಶದ ಗಮನ ಸೆಳೆದಿದೆ.

 

ರಿಂಕು ಮತ್ತು ದಿಲೀಪ್‌ ಘೋಷ್‌ 2021ರಲ್ಲಿ ಪರಿಚಿತರಾದರು. ಅದಾದ ಬಳಿಕ ವಾಕಿಂಗ್‌ ಮಾಡುವ ವೇಳೆ ಭೇಟಿಯಾಗುತ್ತಿದ್ದ ಇವರ ಮಧ್ಯೆ ಕ್ರಮೇಣ ಸ್ನೇಹ ಬೆಳೆಯಿತು. ಇದೀಗ ಮದುವೆ ಹಂತಕ್ಕೂ ಬಂದಿದೆ ಎಂದು ಮೂಲಗಳು ತಿಳಿಸಿವೆ.

 

ಅಂದಹಾಗೆ ಮುಂದಿನ ವರ್ಷ ನಡೆಯುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ದಿಲೀಪ್‌ ಪ್ರಮುಖ ಪಾತ್ರ ವಹಿಸಲಿದ್ದಾರೆ.

You may also like