Water Bottle: 500 ಮಿಲಿ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ತಯಾರಿಸಲು ನೀವು ಯೋಚಿಸುವುದಕ್ಕಿಂತ ಹೆಚ್ಚಿನ ನೀರು ಬೇಕಾಗುತ್ತದೆ. ಪೆಸಿಫಿಕ್ ಇನ್ಸ್ಟಿಟ್ಯೂಟ್(Phecific Institute) ಪ್ರಕಾರ, ಬಾಟಲಿಯನ್ನು ಸ್ವತಃ ಉತ್ಪಾದಿಸಲು ಸುಮಾರು 2.3 ಲೀಟರ್ ನೀರು ಬೇಕಾಗುತ್ತದೆ. ನೀವು ಒಳಗೆ 500 ಮಿಲಿ ನೀರನ್ನು ಸೇರಿಸಿದಾಗ, ಒಟ್ಟು ನೀರು ಸುಮಾರು 2.8 ಲೀಟರ್ ಆಗಿರುತ್ತದೆ, ಇದು ನೀವು ಕುಡಿಯುವ ಪ್ರಮಾಣಕ್ಕಿಂತ(Drinking water) ಮೂರು ಪಟ್ಟು ಹೆಚ್ಚು.
ಪರಿಸರದ(Environment) ಮೇಲೆ ಇದು ಬೀರುವ ಪರಿಣಾಮವು ಖಾಲಿಯಾಗುವ ನೀರಿಗಿಂತಲೂ ಮಿಗಿಲಾಗಿದೆ. ಪಿಇಟಿ(PET) ಪ್ಲಾಸ್ಟಿಕ್ ಉತ್ಪಾದನೆಯು ಹಸಿರುಮನೆ ಅನಿಲಗಳನ್ನು ಸಹ ಬಿಡುಗಡೆ ಮಾಡುತ್ತದೆ. ರಾಷ್ಟ್ರೀಯ ಪರಿಸರ ಆರೋಗ್ಯ ವಿಜ್ಞಾನ ಸಂಸ್ಥೆಯ ಅಧ್ಯಯನವು 500 ಮಿಲಿ ಬಾಟಲಿಯನ್ನು ತಯಾರಿಸುವುದರಿಂದ 0.034 ರಿಂದ 0.046 ಕೆಜಿ CO₂ ಬಿಡುಗಡೆಯಾಗುತ್ತದೆ ಎಂದು ಕಂಡುಹಿಡಿದಿದೆ. ಜೊತೆಗೆ, ಬಾಟಲಿ ನೀರನ್ನು ಸಾಗಿಸುವುದು ಮತ್ತು ತಂಪಾಗಿಸುವುದು ಪ್ರಕ್ರಿಯೆ ವೇಳೆ ಅದರ ಇಂಗಾಲವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದ್ದರಿಂದ, ಬಾಟಲಿ ನೀರಿನಿಂದ ಪರಿಸರಕ್ಕೆ ಹಾನಿ ಇದೆ ಅನ್ನೋದು ನಮಗೆ ತಿಳಿದಿದೆ. ಆದರೆ ನಾವು ಅಂದಾಜು ಮಾಡಿದ್ದಕ್ಕಿಂತ ಅದರ ಹಿಂದೆ ಪರಿಸರ ವೆಚ್ಚವು ಇನ್ನು ಹೆಚ್ಚಿನದಾಗಿದೆ.
