Home » Sexual herracements: 19ರ ಹರೆಯದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ: ಮೈಮೇಲೆ ಮೂತ್ರ ಮಾಡಿದ ಪಾಪಿಗಳು

Sexual herracements: 19ರ ಹರೆಯದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ: ಮೈಮೇಲೆ ಮೂತ್ರ ಮಾಡಿದ ಪಾಪಿಗಳು

0 comments

Sexual herracements: ರಾಜಸ್ಥಾನದ(Rajastana) ಸಿಕಾರ್‌ ಜಿಲ್ಲೆಯಲ್ಲಿ 19ರ ಹರೆಯದ ಯುವಕನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಮೈಮೇಲೆ ಮೂತ್ರ ವಿಸರ್ಜನೆ(Urine) ಮಾಡಿದ ಘಟನೆ ನಡೆದಿದೆ. ಆರೋಪಿಗಳು ಕೃತ್ಯದ ವಿಡಿಯೋ ಚಿತ್ರೀಕರಿಸಿ ವೈರಲ್(Video Viral) ಮಾಡುವುದಾಗಿ ಬೆದರಿಕೆ ಹಾಕಿದ್ದರು. “ಓರ್ವ ದುಷ್ಕರ್ಮಿ ಬೆನ್ನು, ತೋಳುಗಳು, ಹೊಟ್ಟೆ ಮತ್ತು ಜನನಾಂಗಗಳಿಗೆ ಕೋಲಿನಿಂದ ಹಲ್ಲೆ ನಡೆಸಿದ್ದಾನೆ” ಎಂದು ಸಂತ್ರಸ್ತ ಹೇಳಿದ್ದಾನೆ. ದುಷ್ಕರ್ಮಿಗಳು ಗ್ರಾಮದ ಹೊರಗೆ ಕರೆದೊಯ್ದು ಜಾತಿ ನಿಂದನೆ ಮಾಡಿದ್ದಾಗಿ ಸಂತ್ರಸ್ತ ಹೇಳಿಕೊಂಡಿದ್ದಾನೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ, ಫತೇಪುರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ಜಾಟ್, ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಗಂಭೀರವಾಗಿ ಈ ಕುರಿತು ತನಿಖೆ ನಡೆಸಲಾಗುತ್ತಿದೆ. ವಿಧಿವಿಜ್ಞಾನ ಮತ್ತು ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

You may also like