Rakshith Shetty: ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಸಂದರ್ಶನ ಒಂದರಲ್ಲಿ ಹೇಳಿದ ಹೇಳಿಕೆ ಬಾರಿ ಸದ್ದು ಮಾಡುತ್ತಿದೆ.ಇದು ಅವರು ಯಾವ ಅರ್ಥದಲ್ಲಿ ಹೇಳಿದರು ಎಂಬುದು ಗೊತ್ತಿಲ್ಲ. ಅಥವಾ ತಮಾಶೆಗೆ ಹೇಳಿದರೋ ಎಂದು ತಿಳಿಯದು. ಒಟ್ಟಿನಲ್ಲಿ ಅವರ ಹೇಳಿಕೆಗೆ ನಾನಾರ್ಥಗಳನ್ನು ಕಲ್ಪಿಸಲಾಗುತ್ತಿದೆ. ಹಾಗಿದ್ದರೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?
ಅನುಶ್ರೀ ಇಂಟರ್‌ವ್ಯೂ ಟೈಂನಲ್ಲಿ ರಕ್ಷಿತ್ ಶೆಟ್ಟಿಯವರು ‘ನಂಗೆ ಯಾವತ್ತೂ ನನ್ ಏಜ್ ಹುಡುಗೀರು ಇಷ್ಟ ಆಗ್ತಾ ಇರ್ಲಿಲ್ಲ, ನನಗಿಂತ ದೊಡ್ಡವ್ರೇ ಇಷ್ಟ ಆಗ್ತಿದ್ರು.. ಎಂದಿದ್ದಾರೆ ನಟ ರಕ್ಷಿತ್ ಶೆಟ್ಟಿ. ಆಗ ಬಿದ್ದುಬಿದ್ದು ನಕ್ಕ ನಿರೂಪಕಿ ಅನುಶ್ರೀ ಅವರು ‘ಅದಕ್ಕೇ ನಿಮ್ಗೆ ನಿಮ್ ಟೀಚರ್ ಇಷ್ಟ ಆಗಿದ್ದಾ?’ ಎಂದು ಕೇಳಿದ್ದಾರೆ. ಅದಕ್ಕೆ ನಗುತ್ತ ಉತ್ತರಿಸಿದ ರಕ್ಷಿತ್ ಶೆಟ್ಟಿ ‘ಟೀಚರ್ ಮಾತ್ರ ಅಲ್ಲ, ಸುಮಾರು ಜನ ಇಷ್ಟ ಆಗಿದ್ರು’ ಎಂದಿದ್ದಾರೆ.
