Home » CM Siddaramiah: CET ಯಲ್ಲಿ ಜನಿವಾರ ಕತ್ತರಿಸಿದ ವಿಚಾರ – ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ

CM Siddaramiah: CET ಯಲ್ಲಿ ಜನಿವಾರ ಕತ್ತರಿಸಿದ ವಿಚಾರ – ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ

0 comments

CM Siddaramiah : ರಾಜ್ಯದಲ್ಲಿ ಜನಿವಾರ ವಿಚಾರ ಭಾರಿ ಸದ್ದು ಮಾಡುತ್ತಿದೆ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಧರಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿ ge ಪರೀಕ್ಷೆ ಬರೆಯಲು ಅವಕಾಶಕೊಡದ ವಿಚಾರ ಹಾಗೂ ಜನಿವಾರ ತೆಗೆಸಿದ ವಿಚಾರ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಇಡೀ ಬ್ರಾಹ್ಮಣ ಸಮಾಜವೇ ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಆಗಿದೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಈ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಇಟಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ವಿಚಾರ ನಿಜಕ್ಕೂ ಖಂಡನೀಯ. ಜನಿವಾರದ ವಿಚಾರದಲ್ಲಿ ಯಾರು ತಪ್ಪು ಮಾಡಿದ್ದಾರೋ ಅಂತವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ಕೊಡಲಾಗಿದೆ. ಅಲ್ಲದೆ ಪರೀಕ್ಷಾ ನಿಯಮ ಮೀರಿ ವರ್ತಿಸಿರುವ ಹಾಗೂ ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮವಾಗಲಿದೆ ಎಂದರು.

You may also like