Viral News: ಇಲ್ಲೊಬ್ಬ ವ್ಯಕ್ತಿ ಟೈಲರ್ ತನ್ನ ಬಟ್ಟೆಯನ್ನು ಸರಿಯಾದ ಟೈಂಗೆ ನೀಡ್ಲಿಲ್ಲ ಎನ್ನುವ ಕಾರಣಕ್ಕೆ ಕೋರ್ಟ್ ಮೊರೆ ಹೋಗಿರುವ ಘಟನೆ ನಡೆದಿದೆ. ಹಾಗೂ ತನಗೆ ಪರಿಹಾರ ನೀಡ್ಬೇಕು ಎಂದು ಆಗ್ರಹಿಸಿದ್ದಾನೆ.
ಪಾಕಿಸ್ತಾನದ ಕರಾಚಿಯಲ್ಲಿ ಈ ಘಟನೆ ನಡೆದಿದೆ.
ಯುವಕನೋರ್ವ ನಿಶ್ಚಿತಾರ್ಥದಲ್ಲಿ ಧರಿಸಲು ಬಟ್ಟೆ ಖರೀದಿ ಮಾಡಿದ್ದ. ಅದನ್ನು ಸ್ಟಿಚ್ ಮಾಡೋಕೆ ಟೈಲರ್‌ಗೆ ನೀಡಿದ್ದು. ಆದರೆ ಟೈಲರ್ ಸರಿಯಾದ ಸಮಯಕ್ಕೆ ಬಟ್ಟೆ ನೀಡಿಲ್ಲ. ನಿಶ್ಚಿತಾರ್ಥದ ದಿನ ಅವರ ಪ್ಲಾನ್ ಉಲ್ಟಾ ಆಗಿದೆ. ಬೇರೆ ಡ್ರೆಸ್ ಧರಿಸಿ ನಿಶ್ಚಿತಾರ್ಥ ಮುಗಿಸಿದ್ದಾನೆ. ಇದರಿಂದ ಬೇಸರಗೊಂಡ ವ್ಯಕ್ತಿ ಕೋರ್ಟ್ ಮೊರೆ ಹೋಗಿದ್ದಾನೆ.
ಕೋರ್ಟ್‌ನಲ್ಲಿ ಅರ್ಜಿ ಸಲ್ಲಿರುವ ವ್ಯಕ್ತಿ ಟೈಲರ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸುವಂತೆ ಒತ್ತಾಯ ಮಾಡಿದ್ದಾನೆ. 50 ಸಾವಿರ ರೂಪಾಯಿ ದಂಡದ ರೂಪದಲ್ಲಿ ನೀಡಬೇಕು, ಹಾಗೂ 50ಸಾವಿರ ರೂಪಾಯಿಯನ್ನು ಮಾನಸಿಕ ಹಿಂಸೆ ಅನುಭವಿಸಿದ್ದಕ್ಕೆ ನೀಡಬೇಕು ಎಂದು ಆಗ್ರಹಿಸಿದ್ದಾನೆ.
