12
Malpe: ಮಲ್ಪೆ ಬಂದರಿನಲ್ಲಿ ಬೋಟ್ ರಿಪೇರಿಗೆ ಬಂದ ವ್ಯಕ್ತಿ ಒಬ್ಬರು ಬೋಟ್ ನಲ್ಲಿಯೇ ತಲೆ ತಿರುಗಿ ಬಿದ್ದು ಸಾವನಪ್ಪಿರುವ ಘಟನೆ ನಡೆದಿದೆ
ಹೌದು, ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಬೋಟಿನಲ್ಲಿ ಬಲೆ ರಿಪೇರಿ ಮಾಡುತ್ತಿದ್ದ ಮೀನುಗಾರನೊರ್ವ ತಲೆ ತಿರುಗಿ ಬಿದ್ದು ಸಾವನ್ನಪ್ಪಿರುವ ಘಟನೆ ಎ. 22ರಂದು ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಡೆದಿದೆ. ಬಡಾನಿಡಿಯೂರಿನ ರಮೇಶ್ ಟಿ. (52) ಮೃತಪಟ್ಟವರು.
ಅವರು ಬಿದ್ದ ತತ್‌ಕ್ಷಣ ಅವರನ್ನು ಜತೆಯಲ್ಲಿ ಇದ್ದವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ರಮೇಶ್ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
