6
Online Fraud: ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಗಮನಿಸಿ ಆನ್ಲೈನ್ನಲ್ಲಿ ಸೀರೆ ಬುಕ್ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿ ಪಾರ್ಸೆಲ್ ನೋಡಿ ಶಾಕ್ಗೊಳಗಾಗಿದ್ದಾರೆ.
ರಾಜ್ಯದ ಸಕಾಲ ಮಿಷನ್ ನಿರ್ದೇಶಕರಿ ಪಲ್ಲವಿ ಅಕುರಾತಿ ವಂಚನೆಗೆ ಒಳಗಾದ ಐಎಎಸ್ ಅಧಿಕಾರಿ. ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ತಿಂಗಳೂ ಪೂರ್ಣಿಮಾ ಕಲೆಕ್ಷನ್ ಎಂಬ ಯೂಟ್ಯೂಬ್ ಚಾನೆಲ್ ನೋಡುವಾಗ ತಮಿಳುನಾಡಿದ ಮಧುರೈ ಸುಂಗುಡಿ ಕಾಟನ್ ಸೀರೆ ಕುರಿತು ಜಾಹೀರಾತನ್ನು ನೋಡಿ ಖರೀದಿಸುವ ಉದ್ದೇಶದಿಂದ ಪಲ್ಲವಿ ಅವರು ಈ ಸೀರೆಯ ಸ್ಕ್ರೀನ್ಶಾಟ್ ಫೋಟೋ ತೆಗೆದು ಪೂರ್ಣಿಮಾ ಕಲೆಕ್ಷನ್ ವಾಟ್ಸಪ್ಗೆ ಕಳುಹಿಸಿದ್ದಾರೆ. ಜೊತೆಗೆ ಆನ್ಲೈನ್ ಮೂಲಕ ಮಾ.10 ರಂದು 850ರೂ. ಪಾವತಿ ಮಾಡಿದ್ದಾರೆ.
ಆದರೆ ಆರ್ಡರ್ ಮಾಡಿ ಒಂದು ತಿಂಗಳಾದರೂ ಸೀರೆ ಬಂದಿಲ್ಲ. ವಿಚಾರಣೆ ಮಾಡಿದಾಗ ಕರೆ ಮಾಡಿದಾಗ ಪ್ರತಿಕ್ರಿಯೆ ಇಲ್ಲ. ಸಂದೇಶ ಕಳುಹಿಸಿದರೂ ಯಾವುದೇ ಸ್ಪಂದನೆ ಇಲ್ಲದ ಕಾರಣ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಪಲ್ಲವಿ ಅಕುರಾತಿ ದೂರು ನೀಡಿದ್ದಾರೆ.
