Terror Attack : ಕಾಶ್ಮೀರದಲ್ಲಿ ಪಹಲ್ಗಾಮ್ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮನಬಂದಂತೆ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರವಾಸಕ್ಕೆಂದು ಆಗಮಿಸಿದ್ದ ಜನರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ದಾಳಿಗೆ ರಾಜ್ಯದ ಇಬ್ಬರೂ ಸೇರಿ ಒಟ್ಟು 28 ಮಂದಿ ಬಲಿಯಾಗಿದ್ದಾರೆ. ಈ ವೇಳೆ ಪ್ರವಾಸಿಗರನ್ನು ಉಗ್ರರ ದಾಳಿಯಿಂದ ರಕ್ಷಿಸಲು ಹೋಗಿ ಸ್ಥಳೀಯ ಕಾಶ್ಮೀರಿ ವ್ಯಕ್ತಿಯೊಬ್ಬರು ಗುಂಡೇಟಿಗೆ ಬಲಿಯಾಗಿದ್ದಾರೆ.
ಹೌದು, ಕುದುರೆಗಳನ್ನು ಪ್ರವಾಸಿಗರಿಗೆ ಬಾಡಿಗೆ ನೀಡುತ್ತಿದ್ದ ಸೈಯದ್ ಆದಿಲ್ ಹುಸೇನ್ ಶಾ (30) ವೇಳೆ ಪ್ರವಾಸಿಗರನ್ನು ಉಗ್ರರ ದಾಳಿಯಿಂದ ರಕ್ಷಿಸಲು ಹೋಗಿ ಗುಂಡೇಟಿಗೆ ಬಲಿಯಾಗಿದ್ದಾರೆ. ಘಟನೆಯ ವೇಳೆ ಪ್ರವಾಸಿಗರನ್ನು ಕುದುರೆಗಳ ಮೇಲೆ ಕುಳ್ಳಿರಿಸಿ ಬೈಸರನ್‌ಗೆ ತೆರಳುತ್ತಿದ್ದಾಗ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಕುದುರೆ ಮೇಲೆ ಕುಳಿತ ಪ್ರವಾಸಿಗರನ್ನು ರಕ್ಷಿಸಲು ಉಗ್ರರ ಕೈಯಲ್ಲಿದ್ದ ಬಂದೂಕು ಕಸಿದುಕೊಳ್ಳಲು ಹೋದಾಗ ಆದಿಲ್ ಹುಸೇನ್ ಮೇಲೂ ಉಗ್ರರು ಗುಂಡು ಹಾರಿಸಿ ಕೊಂದಿದ್ದಾರೆ.
