6
Mangaluru : ಮಂಗಳೂರಿನಲ್ಲಿ ಅಕ್ರಮ ದನ ಸಾಗಾಟಕ್ಕೆ ಯತ್ನಿಸಿ ಯುವಕರು ಪೊಲೀಸ್ ವಶವಾಗಿರುವ ಘಟನೆ ನಡೆದಿದೆ.
ಕೂಳೂರು ಸೇತುವೆಯ ಬಳಿಯಿಂದ ತಣ್ಣೀರು ಬಾವಿಗೆ ಹೋಗುವ ರಸ್ತೆಯಲ್ಲಿ ಗುರುವಾರ ರಾತ್ರಿ ಯುವಕರು ಮೂರು ದನಗಳಿಗೆ ಆಹಾರ ನೀಡುತ್ತಾ ಅದನ್ನು ಹಿಡಿದು ವಾಹನದಲ್ಲಿ ತುಂಬಿಸಿ ಸಾಗಿಸುತ್ತಿದ್ದಾಗ ಸಂಶಯಗೊಂಡ ಸ್ಥಳೀಯರು ತಡೆದು ಪ್ರಶ್ನಿಸಿದ್ದಾರೆ. ಬಳಿಕ ದನ ಸಾಗಿಸಲು ಯತ್ನಿಸುತ್ತಿದ್ದಾರೆ ಎಂದು ತಿಳಿದು, ತಡೆದು ಅವರನ್ನು ಪೊಲೀಸರಿಗೊಪ್ಪಿಸಿದ್ದಾರೆ.
