Home » Kalaburagi : ಬಜರಂಗದಳ ಕಾರ್ಯಕರ್ತರಿಂದ ಪಾಕಿಸ್ತಾನ ಧ್ವಜಕ್ಕೆ ಅವಮಾನ – ಹಲವರು ಪೊಲೀಸ್ ವಶಕ್ಕೆ

Kalaburagi : ಬಜರಂಗದಳ ಕಾರ್ಯಕರ್ತರಿಂದ ಪಾಕಿಸ್ತಾನ ಧ್ವಜಕ್ಕೆ ಅವಮಾನ – ಹಲವರು ಪೊಲೀಸ್ ವಶಕ್ಕೆ

0 comments

Kalaburagi : ಪಹಲ್ಗಾಮ್ ದಾಳಿಯಿಂದಾಗಿ ಭಾರತದ ಜನರು ಉಗ್ರ ಕೋಪಕ್ಕೆ ಒಳಗಾಗಿದ್ದಾರೆ. ಪಾಕಿಸ್ತಾನದ ಮೇಲೆ ಕಿಡಿ ಕಾರುತ್ತಿದ್ದಾರೆ. ಕೇಂದ್ರ ಸರ್ಕಾರವು ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಗಳಲ್ಲಿ ದೇಶ ಬಿಡಬೇಕೆಂದು ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಕೆಲವು ಭಜರಂಗದಳದ ಕಾರ್ಯಕರ್ತರು ರಸ್ತೆಯ ಮೇಲೆ ಪಾಕಿಸ್ತಾನದ ಧ್ವಜವನ್ನು ಬಿಡಿಸಿ ಅಪಮಾನ ಮಾಡಿದ್ದಾರೆ.

ಹೌದು, ಕಲಬುರಗಿಯಲ್ಲಿ ಬಜರಂಗದಳದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ (ಏ.25) ಪಾಕಿಸ್ತಾನ ಧ್ವಜವನ್ನು ರಸ್ತೆ ಹಾಗೂ ಇಕ್ಕೆಲಗಳಲ್ಲಿ ಬರೆದು ಸಾರ್ವಜನಿಕರು ಅದರ ಮೇಲೆ ಓಡಾಡಿ ತುಳಿದು ಅವಮಾನ ಮಾಡುವ ರೀತಿಯಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಬಜರಂಗದಳದ ಕಾರ್ಯಕರ್ತರು ಉಗ್ರರು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿರುವುದಕ್ಕೆ ಪ್ರತಿಕಾರವಾಗಿ ನಾವು ಪಾಕಿಸ್ತಾನ ಧ್ವಜವನ್ನು ಕಾಲಡಿಯಲ್ಲಿ ತುಳಿದು ಸಾರ್ವಜನಿಕವಾಗಿ ಅವಮಾನ ಮಾಡುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

You may also like