6
Chitradurga : 250 ವರ್ಷಗಳ ಗೋರಿಯ ಎದೆ ಭಾಗದಲ್ಲಿ ಉಸಿರಾಟದ ಲಕ್ಷಣ ಕಂಡು ಬಂದ ಅಚ್ಚರಿ ಘಟನೆ ಒಂದು ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಇದನ್ನು ಕಂಡು ಜನರು ಅಚ್ಚರಿ ಪಡುತ್ತಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Kuduremukha: ಪ್ರವಾಸಿಗರಿಗೆ ಗುಡ್ ನ್ಯೂಸ್: ಕುದುರೆಮುಖ ಚಾರಣಕ್ಕೆ ಅವಕಾಶ!
ಹೌದು, ಚಿತ್ರದುರ್ಗದ ಫಕ್ರುಲ್ಲಾ ಶಾ ಖಾದ್ರಿ ಎಂಬ ಗೋರಿಯೇ ಉಸಿರಾಡಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಈ ದರ್ಗಾ ಸುಮಾರು 250 ವರ್ಷಗಳಷ್ಟು ಹಳೆಯದಾಗಿದ್ದು, ಗೋರಿಯ ಉಸಿರಾಟ ಕಂಡು ಪವಾಡ ಎಂದ ಮುಸ್ಲಿಂರು ಹೇಳುತ್ತಿದ್ದಾರೆ. ಗೋರಿ ಉಸಿರಾಟ ಸುದ್ದಿ ತಿಳಿದು ನೋಡಲು ಜನ ಸಾಗರವೇ ಹರಿದು ಬಂದಿದೆ. ಗೋರಿಗೆ ಮುಚ್ಚಿರುವ ಹೊದಿಕೆ ಏರಿಳಿತ ಕಂಡು ಉಸಿರಾಡುತ್ತಿದೆ ಎಂಬ ವದಂತಿ ಹಬ್ಬಿದೆ.
