Home » Karnataka: ಅನಧಿಕೃತ ಬಡಾವಣೆಗಳಲ್ಲಿ ಜಮೀನು ಖರೀದಿಸಿದವರಿಗೆ ಬಿಗ್ ಶಾಕ್!

Karnataka: ಅನಧಿಕೃತ ಬಡಾವಣೆಗಳಲ್ಲಿ ಜಮೀನು ಖರೀದಿಸಿದವರಿಗೆ ಬಿಗ್ ಶಾಕ್!

0 comments
Minister Krishnabaire Gowda

Karnataka: ರಾಜ್ಯದಲ್ಲಿ ಅನಧಿಕೃತ ಬಡಾವಣೆಗಳ ಜಮೀನುಗಳನ್ನು ಮುಟ್ಟುಗೋಲು ಹಾಕಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಅನಧಿಕೃತ ಬಡಾವಣೆ ಮಾಡಿದರೆ ಇನ್ನು ಮುಂದೆ ತಲೆ ಎತ್ತಬಾರದು. ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಬೇಕು ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ನಿರ್ದೇಶನ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಕೂಡಾ ಅನಧಿಕೃತ ಬಡಾವಣೆಗಳ ಕುರಿತಾಗಿ ಛೀಮಾರಿ ಹಾಕಿದೆ. ಹೀಗಾಗಿ ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿವರಿಸಿದರು

ಹೊಸದಾಗಿ ಬಡಾವಣೆ ನಿರ್ಮಿಸುತ್ತಿರುವವರು ಅಗತ್ಯ ಮಂಜೂರಾತಿ ಹಾಗೂ ಅನುಮತಿಗಳನ್ನು ಕಡ್ಡಾಯವಾಗಿ ಪಡೆಯಬೇಕು. ಅನಧಿಕೃತವಾಗಿ ಕಂದಾಯ ಭೂಮಿಯಲ್ಲಿ ಬಡಾವಣೆ ರಚಿಸುವುದಕ್ಕೆ ಕಡಿವಾಣ ಹಾಕಲಾಗುವುದು. ಅಕ್ರಮ ಬಡಾವಣೆ ನಿರ್ಮಿಸುತ್ತಿದ್ದರೆ ಅಂತಹವರ ಜಮೀನನ್ನು ಮುಟ್ಟುಗೋಲು ಹಾಕಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

You may also like