Home » Education News: 7ನೇ ತರಗತಿಯ ದಿಲ್ಲಿ ಸುಲ್ತಾನ್‌, ಮೊಘಲ್‌ ಪಾಠಕ್ಕೆ ಕೊಕ್!

Education News: 7ನೇ ತರಗತಿಯ ದಿಲ್ಲಿ ಸುಲ್ತಾನ್‌, ಮೊಘಲ್‌ ಪಾಠಕ್ಕೆ ಕೊಕ್!

0 comments
Text book

Education News: ಮೊಘಲರು ಹಾಗೂ ದಿಲ್ಲಿ ಸುಲ್ತಾನರ ಸಾಮಾಜ್ರ್ಯದ ಕುರಿತ ಪಾಠಗಳನ್ನು ಎನ್‌ಸಿಇಆರ್‌ಟಿ 7ನೇ ತರಗತಿ ಪಠ್ಯದಿಂದ ತೆಗೆದಿದೆ. ಪವಿತ್ರ ಭೂಗೋಳ ಶಾಸ್ತ್ರ ಎಂಬ ಪಾಠವನ್ನು ಸೇರಿಸಲಾಗಿದೆ. ಮಹಾಕುಂಭದ ಮಾಹಿತಿಯನ್ನು ನೀಡಲಾಗಿದೆ. ಅಲ್ಲದೇ ಮೆಕ್‌ ಇನ್‌ ಇಂಡಿಯಾ, ಬೇಟಿ ಬಚಾವೋ, ಬೇಟಿ ಪಡಾವೋ ಸೇರಿ ಸರಕಾರದ ಇನ್ನಿತರ ಉಪಕ್ರಮಗಳ ಪಾಠವನ್ನು ಸೇರಿಸಲಾಗಿದೆ.

ಈ ಹಿಂದೆ ಮೊಘಲ್‌ ಮತ್ತು ದಿಲ್ಲಿ ಸುಲ್ತಾನರ ಮಾಹಿತಿಯನ್ನು ಕಡಿತಗೊಳಿಸಿದ್ದ ಎನ್‌ಸಿಇಆರ್‌ಟಿ ಈ ಬಾರಿ ಸಂಪೂರ್ಣವಾಗಿ ತೆಗೆದು ಹಾಕಿದೆ. ಇದು ಪಠ್ಯಪುಸ್ತಕದ ಮೊದಲ ಭಾಗವಷ್ಟೇ. ಕೆಲ ತಿಂಗಳುಗಳಲ್ಲಿ 2ನೇ ಭಾಗ ಬಿಡುಗಡೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಪಠ್ಯದಿಂದ ಕೈ ಬಿಟ್ಟ ವಿಚಾರಗಳ ಕುರಿತು ಪ್ರತಿಕ್ರಿಯೆ ನೀಡಿಲ್ಲ ಎನ್ನುವುದಾಗಿ ಕೂಡಾ ವರದಿಯಾಗಿದೆ.

You may also like