Home » Bangalore: ಕೋಟ್ಯಾಧಿಪತಿ ಮಂಗಳಮುಖಿ ತನುಶ್ರೀ ಹತ್ಯೆ ಪ್ರಕರಣ; ಆರೋಪಿ ಬಂಧನ!

Bangalore: ಕೋಟ್ಯಾಧಿಪತಿ ಮಂಗಳಮುಖಿ ತನುಶ್ರೀ ಹತ್ಯೆ ಪ್ರಕರಣ; ಆರೋಪಿ ಬಂಧನ!

0 comments

Bangalore: ಎಂಟು ದಿನಗಳ ಹಿಂದೆ ಕೋಟ್ಯಾಧಿಪತಿ ಮಂಗಳಮುಖಿ ತನುಶ್ರೀ ಹತ್ಯೆ ಪ್ರಕರಣಕ್ಕೆ ರೋಚಕ ತಿರುವು ದೊರಕಿದೆ. ಪೊಲೀಸರು ಆರೋಪಿ ಗಂಡ ಜಗದೀಶನನ್ನು ಬಂಧನ ಮಾಡಿದ್ದಾರೆ.

ಸಮಾಜದಲ್ಲಿ ಒಂದು ಗೌರವ ಕಾಪಾಡಲು ತನಗೂ ಒಬ್ಬ ಗಂಡನಿದ್ದಾನೆ ಎಂದು ಬಿಂಬಿಸಿಕೊಳ್ಳಲು ತನುಶ್ರೀ ಜಗದೀಶ್‌ನನ್ನು ಬಲವಂತವಾಗಿ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಕ್ಕೆ ಕೊಲೆ ಮಾಡಿದ್ದಾಗಿ ಆರೋಪಿ ಗಂಡ ಜಗದೀಶ್‌ ಹೇಳಿದ್ದಾನೆ. ಇಷ್ಟವಿಲ್ಲದಿದ್ದರೂ ಜಗದೀಶ್‌ಗೆ ತನ್ನ ಜೊತೆಗೆ ಇರುವಂತೆ ತನುಶ್ರೀ ಒತ್ತಾಯಿಸಿದ್ದರಿಂದ ಕೊಲೆ ಮಾಡಿ ತಿರುಪತಿಗೆ ಹೋಗಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಈ ಪ್ರಕರಣದಲ್ಲಿ ಜಗದೀಶ್‌, ಪ್ರಭಾಕರ್‌, ಸುಶಾಂತ್‌ ಬಂಧಿತ ಆರೋಪಿಗಳು.

ಎ.20 ರಂದು ಮಂಗಳಮುಖಿ ತನುಶ್ರೀ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೇ ಮೂರು ದಿನಗಳ ಬಳಿಕ ಮೃತದೇಹ ಪತ್ತೆಯಾಗಿತ್ತು.

ಜಗದೀಶ್‌ ಮತ್ತು ತನುಶ್ರೀ ಅವರು ಸೋಷಿಯಲ್‌ ಸರ್ವಿಸ್‌ ಉದ್ದೇಶದಿಂದ ಪರಿಚಯವಾಗಿದ್ದು, ಇವರಿಬ್ಬರು ವಿವಿಧೆಡೆ ಒಟ್ಟಿಗೆ ಪ್ರಯಾಣವನ್ನು ಮಾಡುತ್ತಿದ್ದರು. ಜಗದೀಶ್‌ ಆಗಾಗ ತನುಶ್ರೀ ಮನೆಗೆ ಬಂದು ಹೋಗುತ್ತಿದ್ದ. ಇದನ್ನೇ ಸಲುಗೆಯಾಗಿ ಬಳಸಿಕೊಂಡ ತನುಶ್ರೀ ತನ್ನನ್ನು ಮದುವೆಯಾಗುವಂತೆ ಜಗದೀಶನಿಗೆ ಬಲವಂತ ಮಾಡಿದ್ದಾಳೆ.

ತನುಶ್ರೀ ಕಾಟದಿಂದ ಬೇಸತ್ತ ಜಗದೀಶ್‌ ಆಕೆಯನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದಾನೆ. ಒಬ್ಬನಿಗೆ ಕೊಲೆ ಮಾಡಲು ಧೈರ್ಯ ಸಾಲದೆ ತನ್ನಿಬ್ಬರು ಸ್ನೇಹಿತರನ್ನ ಜೊತೆಯಲ್ಲಿ ಇರೋದಕ್ಕೆ ಕರೆತಂದಿದ್ದನು. ಎ.17ರ ರಾತ್ರಿ ತನುಶ್ರೀ ಮನೆಗೆ ಬಂದಿದ್ದಾನೆ. ತನುಶ್ರೀಗೆ ಮನಸೋ ಇಚ್ಛೆ ಚಾಕು ಇರಿದು ಹತ್ಯೆ ಮಾಡಿದ್ದಾನೆ. ಆಕೆ ಸತ್ತಿದ್ದನ್ನು ಖಚಿತಪಡಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.

ಕೆ.ಆರ್‌.ಪುರಂ ಪೊಲೀಸರು ಆರೋಪಿ ಜಗದೀಶ್‌ ಹಾಗೂ ಆತನಿಗೆ ಕುಮ್ಮಕ್ಕು ಕೊಟ್ಟ ಸ್ನೇಹಿತರನ್ನು ಸೇರಿ ಮೂವರನ್ನು ಬಂಧನ ಮಾಡಿ ಕೋರ್ಟ್‌ ಮುಂದೆ ಹಾಜರು ಪಡಿಸಿದ್ದಾರೆ.

You may also like