6
CET : ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ನಡೆಸಿದ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ದಿನಾಂಕ ಫಿಕ್ಸ್ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೌದು, ರಾಜ್ಯದಲ್ಲಿ ಏ.16 ಮತ್ತು 17 ರಂದು 2025ರ ಸಿಇಟಿ ಪರೀಕ್ಷೆ ನಡೆಸಲಾಗಿದ್ದು ಆದಷ್ಟು ಬೇಗ ಫಲಿತಾಂಶ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ. ಬಹುತೇಕೆ ಮೇ 20 ರ ವೇಳೆಗೆ ಸಿಇಟಿ ರ್ಯಾಂಕಿಂಗ್ ಪ್ರಕಟವಾಗುವ ನಿರೀಕ್ಷೆಯಿದೆ.
ಈಗಾಗಲೇ ದ್ವಿತೀಯ ಪಿಯುಸಿ-2 ಪರೀಕ್ಷೆ ಆರಂಭವಾಗಿದ್ದು, ಮೇ 8 ಕ್ಕೆ ಈ ಪರೀಕ್ಷೆಗಳು ಮುಕ್ತಾಯವಾಗಲಿದೆ. ಆ ನಂತರ ಹತ್ತು ದಿನದಲ್ಲಿ ಮೌಲ್ಯಮಾಪನ ಕಾರ್ಯ ಕೂಡ ಮುಗಿಯಲಿದೆ. ಬಳಿಕ ಅತಿ ಶೀಘ್ರದಲ್ಲೇ ಸಿಇಟಿ ಫಲಿತಾಂಶ ಹೊರಬೀಳಲಿದೆ.
