Home » Accident: ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ವ್ಯಾನ್‌; 12 ಜನ ಸಾವು!

Accident: ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ವ್ಯಾನ್‌; 12 ಜನ ಸಾವು!

0 comments

Accident: ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್‌ವೊಂದು ಆಳವಾದ ಬಾವಿಗೆ ಬಿದ್ದ ಪರಿಣಾಮ 12 ಜನರು ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶದ ಮಂದಸೌರ್‌ ಜಿಲ್ಲೆಯ ಕಚರಿಯಾ ಗ್ರಾಮದಲ್ಲಿ ನಡೆದಿದೆ.

ಅಪಘಾತದಲ್ಲಿ 12 ಜನರು ಸಾವಿಗೀಡಾಗಿದ್ದಾರೆ. ಬಾವಿಗೆ ಬಿದ್ದವರನ್ನು ರಕ್ಷಿಸಲೆಂದು ಹಾರಿದ ಯುವಕ ಕೂಡಾ ಸಾವಿಗೀಡಾಗಿದ್ದಾನೆ. ಉನ್ಹೆಲ್‌ ಹಾಗೂ ರತ್ಲಂ ಜಿಲ್ಲೆಯ ಜನರು ವ್ಯಾನ್‌ನಲ್ಲಿ ಪ್ರಯಾಣ ಮಡುತ್ತಿದ್ದರು. ಖೋಜಂಖೇಡಾ ಗ್ರಾಮದಿಂದ ನಿಮುಚ್‌ ಜಿಲ್ಲೆಯ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೈಕ್‌ ಹಾಗೂ ವ್ಯಾನ್‌ ನಡುವೆ ಅಪಘಾತ ನಡೆದಿದೆ. ಈ ಸಂದರ್ಭದಲ್ಲಿ ವ್ಯಾನ್‌ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದು, ವೇಗವಾಗಿ ಬಂದು ಬಾವಿಗೆ ಬಿದ್ದಿದೆ.

You may also like