Home » MP: ಬಾವಿಗೆ ವ್ಯಾನ್ ಬಿದ್ದ ಪ್ರಕರಣ – 10 ಮಂದಿ ಸಾವನ್ನಪ್ಪಿದ್ದು ಬಾವಿಗೆ ಬಿದ್ದ ರಭಸದಿಂದಲ್ಲ, ಬಾವಿಯೊಳಗಿದ್ದ ಆ ಒಂದು ಅಂಶದಿಂದ !!

MP: ಬಾವಿಗೆ ವ್ಯಾನ್ ಬಿದ್ದ ಪ್ರಕರಣ – 10 ಮಂದಿ ಸಾವನ್ನಪ್ಪಿದ್ದು ಬಾವಿಗೆ ಬಿದ್ದ ರಭಸದಿಂದಲ್ಲ, ಬಾವಿಯೊಳಗಿದ್ದ ಆ ಒಂದು ಅಂಶದಿಂದ !!

0 comments

MP: ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಒಂದು ಬಾವಿಗೆ ಬಿದ್ದು 10 ಜನರು ಸಾವನ್ನಪ್ಪಿದ್ದ ಪ್ರಕರಣ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿತ್ತು. ಆದರೆ ಇದೀಗ ಬ್ಯಾನ್ ಬಿದ್ದ ರಬಸಕ್ಕೆ ಆ 10 ಮಂದಿ ಸತ್ತಿಲ್ಲ, ಬದಲಿಗೆ ಬಾವಿಯಲ್ಲಿರುವ ಆ ಒಂದು ಅಂಶಕ್ಕೆ ಅವರೆಲ್ಲರೂ ಸಾವಿಗೀಡಾಗಿದ್ದಾರೆ ಎಂಬ ಅಚ್ಚರಿ ವಿಚಾರ ಬಯಲಾಗಿದೆ.

ಹೌದು, ಮಧ್ಯಪ್ರದೇಶದ ಮಾಂಡ್ಸೌರ್ ಜಿಲ್ಲೆಯ ಕಚರಿಯಾ ಗ್ರಾಮದಲ್ಲಿ ನಿನ್ನೆ ( ಏಪ್ರಿಲ್ 27 ) ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದರು. ಪ್ರಯಾಣಿಕರಿದ್ದ ವ್ಯಾನ್ ಬಾವಿಗೆ ಬಿದ್ದಿದ್ದು ಬಾವಿಯಲ್ಲಿದ್ದ ವಿಷಕಾರಿ ಅನಿಲದಿಂದಾಗಿ ಪ್ರಯಾಣಿಕರು ಮತ್ತು ರಕ್ಷಣಾ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ ಎಂಬ ಅಂಶ ಇದೀಗ ಬಯಲಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸ್ಥಳೀಯ ನಿವಾಸಿ ಮನೋಹರ್ ಸಿಂಗ್ (42) ಎಂಬಾತ ಬಾವಿಯಲ್ಲಿ ಇಳಿದು ಮೂವರನ್ನು ರಕ್ಷಿಸಿದರೂ, ವಿಷಕಾರಿ ಅನಿಲದಿಂದ ಮೃತಪಟ್ಟರು. ಒಟ್ಟು 10 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ದೇವೇಂದ್ರ (10), ಮುಕೇಶ್ ಕೀರ್ (28), ಮಾಯಾ ಕೀರ್ (26) ಮತ್ತು ಪ್ರಿಯಾಂಶಿ (3) ಸೇರಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸೇರಿದಂತೆ ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿವೆ.

You may also like