Home » Vitla: ದಂಪತಿಗೆ ತಲವಾರು ತೋರಿಸಿ ಬೆದರಿಕೆ ಪ್ರಕರಣ; ಆರೋಪ ಮಾಡಿದವರು ಪ್ರಮಾಣ ಮಾಡಲಿ-ಮುರಳಿಕೃಷ್ಣ ಹಸಂತಡ್ಕ!

Vitla: ದಂಪತಿಗೆ ತಲವಾರು ತೋರಿಸಿ ಬೆದರಿಕೆ ಪ್ರಕರಣ; ಆರೋಪ ಮಾಡಿದವರು ಪ್ರಮಾಣ ಮಾಡಲಿ-ಮುರಳಿಕೃಷ್ಣ ಹಸಂತಡ್ಕ!

0 comments

Vitla: ಪೆಟ್ರೋಲ್‌ ಬಂಕ್‌ ವ್ಯವಹಾರ ವಿಚಾರಕ್ಕೆ ತಲವಾರು ತೋರಿಸಿ ದಂಪತಿಗೆ ಬೆದರಿಕೆ ಒಡ್ಡಿದ ಆರೋಪದಡಿಯಲ್ಲಿ ಬಜರಂಗ ದಳದ ಮುಖಂಡ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ನಿವಾಸಿ ಮುರಳಿಕೃಷ್ಣ ಹಸಂತಡ್ಕ ವಿರುದ್ಧ ನ್ಯಾಯಾಲಯದ ಆದೇಶದಂತೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ಈಗಾಗಲೇ ವರದಿಯಾಗಿತ್ತು.

ಇದೀಗ ಮುರಳಿಕೃಷ್ಣ ಹಸಂತಡ್ಕ ಅವರು ಆರೋಪ ಮಾಡಿದವರು ದೇವರ ಮುಂದೆ ಪ್ರಮಾಣ ಮಾಡಲಿ ಎಂದು ಹೇಳಿದ್ದಾರೆ.

ಪುಣಚ ಗ್ರಾಮದ ನಡುಸಾರು ನಿವಾಸಿ ರಾಮಚಂದ್ರ ಭಟ್‌ ಅವರ ಪುತ್ರ , ಕರ್ನಾಟಕ ಕೇರಳ ಗಡಿಭಾಗದ ಸಾರಡ್ಕದಲ್ಲಿರುವ ಪೆಟ್ರೋಲ್‌ ಬಂಕ್‌ ಪಾಲುದಾರ ಹರೀಶ್‌ ಎನ್‌ ಅವರು ಮುರಳಿಕೃಷ್ಣ ವಿರುದ್ಧ ತಲವಾರು ತೋರಿಸಿ ಬೆದರಿಕೆ ಒಡ್ಡಿದ ದೂರನ್ನು ನೀಡಿದ್ದರು.

ಬೆಳಗ್ಗೆ ಬೇರೆ ಸಂಜೆ ಬೇರೆ ಮಾತನಾಡುವ ಹರೀಶ್‌ ಅವರ ಮಾತಲ್ಲಿ ಸ್ಪಷ್ಟತೆ ಇಲ್ಲ. ಅವರು ನಂಬುವ ದೈವ ದೇವರ ಮುಂದೆ ಅಥವಾ ನಾನು ನಂಬುವ ದೈವಗಳ ಮುಂದೆ ದಂಪತಿ ಪ್ರಮಾಣ ಮಾಡಲಿ. ನನ್ನ ವ್ಯಕ್ತಿತ್ವದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲ ಎಂದು ಹೇಳಿದ್ದಾರೆ.

You may also like