Home » D K Shivakumar: ಬಿಜೆಪಿ ವರ್ತನೆ ಸರಿ ಆಗದಿದ್ದರೆ ಒಂದೂ ಸಭೆ ಮಾಡಲು ಬಿಡಲ್ಲ-ಡಿಕೆಶಿ ಎಚ್ಚರಿಕೆ

D K Shivakumar: ಬಿಜೆಪಿ ವರ್ತನೆ ಸರಿ ಆಗದಿದ್ದರೆ ಒಂದೂ ಸಭೆ ಮಾಡಲು ಬಿಡಲ್ಲ-ಡಿಕೆಶಿ ಎಚ್ಚರಿಕೆ

0 comments
DK Shivakumar

D K Shivakumar: ಬೆಳಗಾವಿ ಕಾಂಗ್ರೆಸ್‌ ಪ್ರತಿಭಟನಾ ಸಮಾವೇಶದಲ್ಲಿಸಿಎಂಭಾಷಣಕ್ಕೆ ಬಿಜೆಪಿ ಮಹಿಳಾ ಕಾರಕರ್ತರು ಅಡ್ಡಿಪಡಿಸಲು ಮುಂದಾಗಿದ್ದಕ್ಕೆ ಮರುಕ್ಷಣದಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಿಸಿಎಂ ಡಿ. ಕೆ.ಶಿವಕುಮಾ‌ರ್ ಅವರು, ದುರ್ವರ್ತನೆ ಸರಿ ಪಡಿಸಿಕೊಳ್ಳದಿದ್ದರೆ ನಿಮಗೆ ಎಲ್ಲಿಯೂ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಬಿಜೆಪಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಪಕ್ಷದ ಕಾರ್ಯಕರ್ತರಿಗೆ ಬುದ್ಧಿವಾದ ಹೇಳಿ, ಸರಿ ಪಡಿಸಬೇಕು. ಇಲ್ಲದಿದ್ದರೆ ನೀವು ಎಲ್ಲಿಯೂ ಕಾರ್ಯಕ್ರಮ ಮಾಡಲು ನಾನು ಬಿಡುವುದಿಲ್ಲ. ಎಲ್ಲ ರೀತಿ ಪ್ರತಿಹೋರಾಟಕ್ಕೆ ಸಿದ್ಧರಿದ್ದೇವೆ. ಮನವಿ ಮಾಡುತ್ತಿಲ್ಲ. ಇದು ಎಚ್ಚರಿಕೆ ಗಂಟೆ ಎಂದರು. ಇದೇ ಮೊದಲ ಬಾರಿ ಬಿಜೆಪಿ ಯವರು 4 ಜನ ಕಾರ್ಯಕರ್ತ ರನ್ನು ಕಳಿಸಿ ಕೊಟ್ಟಿದ್ದಾರೆ. ಪ್ರತಿ ಭಟನೆ ಕಾರ್ಡ್ ಇಟ್ಟುಕೊಂಡು ಕಪ್ಪು ಬಾವುಟ ಪ್ರದರ್ಶಿಸಿ, ಕೂಗಾಟ ಮಾಡಿ ಗದ್ದಲ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಇದು ಸರಿಯಲ್ಲ. ಈ ಪ್ರವೃತ್ತಿ ಮುಂದುವರಿಸಿದರೆ ರಾಜ್ಯದಲ್ಲಿ ಒಂದು ಸಭೆಯನ್ನೂ ಮಾಡಲು ಬಿಡುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆಯಾಗಿದೆ ಎಂದರು.

ಂಡರೆ ಈ ವರ್ತನೆನೀವು ನೆಟ್ಟಗೆ ಮಾಡಿಕೊಂಡರೆ ಸರಿ. ಇದೇರೀತಿ ದುರ್ವತ್ರನೆ ಮುಂದುವರಿ ಸಿದರೆ ನಿಮ್ಮ ವಿರುದ್ಧ ನಿಮಗಿಂತ ಜಾಸ್ತಿ ಹೋರಾಟ ಕಾರ್ಯರೂಪಕ್ಕೆ ತರುವ ಶಕ್ತಿಯನ್ನು ಭಗವಂತ ಮತ್ತು ರಾಜ್ಯದ ಜನತೆ ನನಗೆ ಕೊಟ್ಟಿದ್ದಾರೆ ಎಂದು ಗುಡುಗಿದರು.

You may also like