Home » Mangalore: ಹೆಣ್ಣುಮಕ್ಕಳು ವ್ಯಾನಿಟಿ ಬ್ಯಾಗಿನಲ್ಲಿ ಚೂರಿ ಇಟ್ಟುಕೊಳ್ಳಿ-ಕಲ್ಲಡ್ಕ ಪ್ರಭಾಕರ್‌ ಭಟ್

Mangalore: ಹೆಣ್ಣುಮಕ್ಕಳು ವ್ಯಾನಿಟಿ ಬ್ಯಾಗಿನಲ್ಲಿ ಚೂರಿ ಇಟ್ಟುಕೊಳ್ಳಿ-ಕಲ್ಲಡ್ಕ ಪ್ರಭಾಕರ್‌ ಭಟ್

0 comments

Mangalore: ಗಡಿಭಾಗ ಮಂಜೇಶ್ವರದ ವರ್ಕಾಡಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರು ಹಿಂದೂಗಳು ಮನೆಯಲ್ಲಿ ಒಂದೊಂದು ತಲ್ವಾರ್‌ ಇಟ್ಟುಕೊಳ್ಳಬೇಕು. ಬಂದವರಿಗೆ ತಲವಾರು ತೋರಿಸಿದರೆ ಸಾಕು. ಹಿಂದಕ್ಕೆ ಹೋಗುತ್ತಾರೆ. ಪಹಲ್ಗಾಮ್‌ನಲ್ಲಿ ಉಗ್ರರಿಗೆ ತೋರಿಸಿದರೂ ಸಾಕಿತ್ತು. ಕತೆಯೇ ಬೇರೆ ಆಗುತ್ತಿತ್ತು ಎಂದು ಆರ್‌ಎಸ್‌ಎಸ್‌ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದ್ದಾರೆ ಎಂದು ವರದಿಯಾಗಿದೆ.

ಹಿಂದೆಲ್ಲಾ ಹಿಂದೂ-ಮುಸ್ಲಿಂ ಗಲಾಟೆ ಅಂದರೆ ಮುಸ್ಲಿಮರು ಹೊಡಿಯೋದು, ಹಿಂದೂಗಳು ಓಡುತ್ತಾರೆ ಅಂತ ಇತ್ತು. ಆದರೆ ಈಗ ಹಿಂದೂ ಕೇವಲ ತಿರುಗಿ ಬಿದ್ದಿದ್ದಾನೆ. ಇನ್ನೂ ಹೊಡೀಲಿಕ್ಕೆ ಶುರು ಮಾಡಲಿಲ್ಲ. ಶುರು ಮಾಡಿದರೆ ಏನಾಗುತ್ತೆ ಅಂತ ಆಮೇಲೆ ನೋಡಬೇಕು. ನಾವು ಎದ್ದು ನಿಲ್ಲಬೇಕು. ಇದಕ್ಕಾಗಿ ಮನೆಯಲ್ಲಿ ಒಂದೊಂದು ತಲ್ವಾರ್‌ ಇಟ್ಟುಕೊಳ್ಳಬೇಕು ಎಂದು ಹೇಳಿರುವ ಕುರಿತು ವರದಿಯಾಗಿದೆ.

You may also like