Home » Supreme court: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಬಿ ಆರ್ ಗವಾಯಿ ನೇಮಕ!

Supreme court: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಬಿ ಆರ್ ಗವಾಯಿ ನೇಮಕ!

0 comments

Supreme court: ಸುಪ್ರೀಂ ಕೋರ್ಟ್‌ನ (Supreme court) ಹಾಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಅವಧಿ ಇನ್ನೇನು ಪೂರ್ಣಗೊಳ್ಳಲಿರುವ ಹಿನ್ನಲೆ, ಸರ್ವೋಚ್ಛ ನ್ಯಾಯಾಲಯದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಭೂಷಣ್‌ ರಾಮಕೃಷ್ಣ ಗವಾಯಿ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಕೇಂದ್ರ ಕಾನೂನು ಸಚಿವಾಲಯ ಇಂದು (ಏ .29) ಅಧಿಕೃತ ಅಧಿಸೂಚನೆ ಹೊರಡಿಸಿದೆ. ಪ್ರಸ್ತುತ ಸುಪ್ರೀಂ ಕೋರ್ಟ್ ನ ಹಾಲಿ ಮುಖ್ಯ ನ್ಯಾಯಮೂರ್ತಿಯಾಗಿರುವ ಸಂಜೀವ್ ಖನ್ನಾ ಅವರ ಅವಧಿ ಪೂರ್ಣಗೊಂಡ ನಂತರ ಮೇ 14ರಂದು ಇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಏಪ್ರಿಲ್ 16ರಂದು ಗವಾಯಿ ಅವರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಮೇ 14 ರಿಂದ ನ್ಯಾ ಗವಾಯಿ ಅವರ ಅಧಿಕಾರವಧಿ ಆರು ತಿಂಗಳವರೆಗೆ ಇರಲಿದೆ. ಡಿ. 23ರಂದು ಅವರಿಗೆ 65 ವರ್ಷ ಪೂರ್ಣಗೊಳ್ಳಲಿದ್ದು ಅವರು ನಿವೃತ್ತಿ ಹೊಂದಲಿದ್ದಾರೆ.

You may also like