Home » Andhrapradesh: ಬೈಕ್‌ ಹತ್ತುವ ಮುನ್ನ ಎಚ್ಚರ ಮಹಿಳೆಯರೇ, ಚಕ್ರಕ್ಕೆ ದುಪ್ಪಟ್ಟಾ ಸಿಲುಕಿ ಮಹಿಳೆ ಸಾವು!

Andhrapradesh: ಬೈಕ್‌ ಹತ್ತುವ ಮುನ್ನ ಎಚ್ಚರ ಮಹಿಳೆಯರೇ, ಚಕ್ರಕ್ಕೆ ದುಪ್ಪಟ್ಟಾ ಸಿಲುಕಿ ಮಹಿಳೆ ಸಾವು!

0 comments

Andhrapradesh: ಅನಕಪಲ್ಲಿಯ ಅಚ್ಯುತಪುರಂನಲ್ಲಿ ದ್ವಿಚಕ್ರ ವಾಹನದ ಚಕ್ರಕ್ಕೆ ದುಪ್ಪಟ್ಟಾ ಸಿಲುಕಿ ಮಹಿಳೆ ದಾರುಣವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ಮೃತರನ್ನು ಪೂರ್ವ ಗೋದಾವರಿ ಜಿಲ್ಲೆಯ ಕೇಸನಕುರ್ರು ನಿವಾಸಿ ರಾಮದುರ್ಗ (28) ಎಂದು ಗುರುತಿಸಲಾಗಿದೆ.

ಪೋಲವರಂ ನಿವಾಸಿ ಮೋಹನ್‌ಕೃಷ್ಣ ಎಂಬುವವರನ್ನು ಒಂಭತ್ತು ತಿಂಗಳ ಹಿಂದೆ ಮದುವೆಯಾಗಿದ್ದರು. ತನ್ನ ಪತಿ ಜೊತೆ ದ್ವಿಚಕ್ರ ಹೋಗುತ್ತಿದ್ದಾಗ ರಾಮದುರ್ಗ ಅವರು ಧರಿಸಿದ್ದ ಸ್ಕಾರ್ಫ್‌ ಬೈಕ್‌ ಹಿಂಬದಿಯ ಚಕ್ರಕ್ಕೆ ಸಿಲುಕಿ ಆಕೆಯ ಕುತ್ತಿಗೆ ಅಡಿ ಬಿದ್ದಿದ್ದು, ಸ್ಥಳೀಯರ ಸಹಾಯದಿಂದ ಪತಿ ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರೂ, ಅಷ್ಟರಲ್ಲಿ ಆಕೆ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ಘೋಷಿಸಿದರು.

You may also like