4
Pushpa 2 Movie: ಪುಷ್ಪ 2 ಚಿತ್ರದ ಪ್ರೀಮಿಯರ್ ಶೋ ವೇಳೆ ಉಂಟಾದ ಕಾಲ್ತುಳಿತ ಘಟನೆಯಲ್ಲಿ ರೇವತಿ ಎಂಬ ಮಹಿಳೆ ಸಾವಿಗೀಡಾಗಿದ್ದು, ಅವರ ಪುತ್ರ ಶ್ರೀತೇಜ್ ಗಂಭೀರ ಗಾಯಗೊಂಡಿದ್ದರು. ಆರಂಭದಲ್ಲಿ ಚಿಕಿತ್ಸೆ ನೀಡಿದರೂ ಆತ ಕೋಮಾ ಸ್ಥಿತಿಗೆ ಹೋಗಿದ್ದ. ಇದೀಗ ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಆಸ್ಪತ್ರೆಯಿಂದ ಶ್ರೀತೇಜ್ ಡಿಸ್ಚಾರ್ಜ್ ಆಗಿದ್ದಾನೆ.
ಕಿಮ್ಸ್ ಆಸ್ಪತ್ರೆಯಿಂದ ಬಾಲಕ ಶ್ರೀತೇಜ್ ಡಿಸ್ಚಾರ್ಜ್ ಆಗಿದ್ದು, ಆತನನ್ನು ಮನೆಗೆ ಕಳುಹಿಸದೆ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಅಲ್ಲಿ ಆತನಿಗೆ 15 ದಿನಗಳ ಕಾಲ ಚಿಕಿತ್ಸೆ ನೀಡಲಾಗುವ ಕುರಿತು ವರದಿಯಾಗಿದೆ.
