6
Mangaluru: ಮಂಗಳೂರು (Mangaluru) ನಗರದ ಮೇರಿಹಿಲ್‌ನಲ್ಲಿ ಕೊರಗಜ್ಜನ ಕಟ್ಟೆಗೆ ಬಂದ ಕಳ್ಳ ಕೊರಗಜ್ಜನಿಗೆ ಭಕ್ತಿಯಿಂದ ನಮಸ್ಕರಿಸಿ, ನಂತರ ಕಟ್ಟೆಗೆ ಒಂದು ಸುತ್ತು ಬಂದಿದ್ದಾನೆ. ಕಟ್ಟೆಯ ಗೇಟ್ ತೆರೆದು ಒಳಗೆ ಪ್ರವೇಶಿಸಿದ ಆತ ಏನನ್ನೋ ಬೇಡಿಕೊಂಡು, ಸುತ್ತಲೂ ಕಣ್ಣು ಹಾಯಿಸಿದ ಬಳಿಕ ಕಾಣಿಕೆ ಹುಂಡಿಯನ್ನು ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಕಳ್ಳನ ಕೈಚಳಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಇದೀಗ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
