8
Mumbai: ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಯನ್ನು ಅತಿ ಸಣ್ಣ ಪ್ರಾಯದಲ್ಲೇ ಪಡೆದುಕೊಂಡ ಕಂಟೆಂಟ್ ಕ್ರಿಯೇಟರ್ ಪ್ರಾಣ ಕಳೆದುಕೊಂಡಿದ್ದ ಘಟನೆ ನಡೆದಿತ್ತು. ಇದೀಗ ಈ ಸಾವಿನ ಹಿಂದಿನ ಕಾರಣ ರಿವೀಲ್ ಆಗಿದೆ.
ಮಿಶಾ ಅಗರ್‌ವಾಲ್ ಎ.24 ರಂದು ತನ್ನ ಹುಟ್ಟುಹಬ್ಬದ ಎರಡು ದಿನದ ಮುನ್ನ ಪ್ರಾಣ ಕಳೆದುಕೊಂಡಿದ್ದರು. ಆತ್ಮಹತ್ಯೆಯ ಕಾರಣ ಏನೆಂದು ಇದೀಗ ಕುಟುಂಬಸ್ಥರು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ಇನ್ಸ್‌ಟಾಗ್ರಾಂ ಖಾತೆಯಲ್ಲಿ ಫಾಲೋವರ್ಸ್‌ಗಳು ಕಡಿಮೆ ಆಗುತ್ತಾ ಬಂದಿತ್ತು. ಇದರಿಂದ ಮಿಶಾ ಖಿನ್ನತೆಗೆ ಒಳಗಾಗಿದ್ದು, ಫಾಲೋವರ್ಸ್‌ಗಳು ಕಡಿಮೆ ಆದರೆ ಏನು ಮಾಡಬೇಕೆಂದು ಹೇಳಿ ದುಃಖ ಪಡುತ್ತಿದ್ದಳು. ಫಾಲೋವರ್ಸ್‌ಗಳು ಕಡಿಮೆ ಆಗಿದ್ದಕ್ಕೆ ಖಿನ್ನತೆಗೆ ಒಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.
