Home » NEET Exam: ಮೇ 4 ರಂದು ನೀಟ್‌ ಪರೀಕ್ಷೆ; ಪರೀಕ್ಷಾರ್ಥಿಗಳಿಗೆ ಮುಖ್ಯವಾದ ಮಾಹಿತಿ!

NEET Exam: ಮೇ 4 ರಂದು ನೀಟ್‌ ಪರೀಕ್ಷೆ; ಪರೀಕ್ಷಾರ್ಥಿಗಳಿಗೆ ಮುಖ್ಯವಾದ ಮಾಹಿತಿ!

0 comments
NEET Exam

NEET Exam: 2025-26ನೇ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಮೇ.4 ರಂದು ದೇಶಾದ್ಯಂತ ಯುಜಿ ನೀಟ್‌ ಪರೀಕ್ಷೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ.

ವಿದ್ಯಾರ್ಥಿಗಳು ಮಧ್ಯಾಹ್ನ 1.30 ರೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪ್ರವೇಶ ಪತ್ರದ ಜೊತೆಗೆ ಕಾಲೇಜಿನ ಗುರುತಿನ ಚೀಟಿ ಆಧಾರ್‌ ಅಥವಾ ಪ್ಯಾನ್‌ ಕಾರ್ಡ್‌ ಸೇರಿ ಯಾವುದಾದರೂ ಒಂದು ಗುರುತಿನ ಚೀಟಿ ಮತ್ತು ಎರಡು ಪಾಸ್‌ಪೋರ್ಟ್‌ ಅಳತೆಯ ಫೋಟೋ ಕಡ್ಡಾಯವಾಗಿ ತರಬೇಕು.

ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯವಾಗಿದೆ. ವಸ್ತ್ರ ಸಂಹಿತೆ ಅನುಸಾರ ಪೂರ್ಣ ತೋಳು ಇರುವ ಮೇಲಂಗಿ, ದೊಡ್ಡ ಬಟನ್‌ಗಳು ಇರುವ ಶರ್ಟ್‌, ಪ್ಯಾಂಟ್‌, ಶೂ, ಸಾಕ್ಸ್‌, ಎತ್ತರ ಚಪ್ಪಲಿಗಳು, ಕಿವಿಯೋಲೆ, ಬಳೆ, ಸರ, ಕಾಲ್ಗೆಜ್ಜೆ, ಮೂಗುತಿ, ಜಡೆ, ಕ್ಲಿಪ್‌ ಮತ್ತು ಇತರೆ ಯಾವುದೇ ಮೆಟಲ್‌ ಉಪಕರಣಗಳನ್ನು ಧರಿಸುವಂತಿಲ್ಲ. ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತರುವಂತಿಲ್ಲ.

You may also like