8
Auto Fare Hike: ಬೆಂಗಳೂರು ನಗರದಲ್ಲಿ ಆಟೋ ಮೀಟರ್ ದರ ಏರಿಕೆ ಮಾಡುವ ಕುರಿತು ಕಳೆದ ಮೂರು ವರ್ಷಗಳಿಂದ ಆಟೋ ಚಾಲಕ ಹಾಗೂ ಮಾಲೀಕರ ಸಂಘಟನೆಗಳು ನಿರಂತ ಹೋರಾಟ ಮಾಡುತ್ತಿದ್ದು, ಇದೀಗ ಜಿಲ್ಲಾಡಳಿತ ಚಾಲಕರ ಮನವಿಯನ್ನು ಪುರಸ್ಕರಿಸಿ, ಆಟೋ ದರ ಏರಿಕೆ ಮಾಡಿದೆ. ಅಧಿಕೃತ ಆದೇಶ ಹೊರಬೀಳುವುದಷ್ಟೇ ಬಾಕಿ ಇದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಈಗ ಕನಿಷ್ಠ ದರ 30 ರೂಪಾಯಿ ಹಾಗೂ ನಂತರ ಪ್ರತಿ ಕಿಲೋ ಮೀಟರ್ ಗೆ 15 ರೂಪಾಯಿ ದರ ಇದೆ. ಇದೀಗ ಪರಿಷ್ಕೃತ ದರ ಪಟ್ಟಿ ಪ್ರಕಾರ ಕನಿಷ್ಠ ದರ 30 ರಿಂದ 35 ರೂಪಾಯಿಗೆ, ಅಂದರೆ ಐದು ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ. ನಂತರದ ಪ್ರತಿ ಕಿಲೋ ಮೀಟರ್ ದರ 15 ರಿಂದ 18 ರೂಪಾಯಿಗೆ, ಅಂದರೆ ಮೂರು ರೂಪಾಯಿ ಏರಿಕೆ ಆಗಲಿದೆ ಎಂದು ವರದಿಯಾಗಿದೆ.
ಆಟೋ ಮೀಟರ್ ದರ ಏರಿಕೆಗೆ ಜಿಲ್ಲಾಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿರುವ ಕುರಿತು ವರದಿಯಾಗಿದೆ.
