Home » Viral Video : ಕಾಡಿನಲ್ಲಿ ಹುಲಿಯೊಂದಿಗೆ ಕರಡಿಯ ರಣರೋಚಕ ಕಾಳಗ!! ವಿಡಿಯೋ ವೈರಲ್

Viral Video : ಕಾಡಿನಲ್ಲಿ ಹುಲಿಯೊಂದಿಗೆ ಕರಡಿಯ ರಣರೋಚಕ ಕಾಳಗ!! ವಿಡಿಯೋ ವೈರಲ್

0 comments

Viral Video : ಕಾಡಿನ ರಾಜ ಮತ್ತು ಹುಲಿಯ ಕಾಳಗದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ಹೌದು, ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಪೆಂಚ್ ಹುಲಿ ಅಭಯಾರಣ್ಯದಲ್ಲಿ ಜರುಗಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕರಡಿ ಘರ್ಜನೆಗೆ ಹೆದರಿ ಹುಲಿರಾಯ ಪಲಾಯನ ಮಾಡುವ ದೃಶ್ಯವಿದೆ. ಕರಡಿ ಒಂದು ಕೊಳದ ಬಳಿ ನಿಂತಿದ್ದಾಗ ಅಲ್ಲಿಗೆ ಒಂದು ಹುಲಿ ಬರುತ್ತದೆ.. ಹುಲಿ ಕರಡಿಯ ಹತ್ತಿರ ಬರಲು ಪ್ರಯತ್ನಿಸಿತು. ಆ ಸಮಯದಲ್ಲಿ ಕರಡಿ ಭಯವಿಲ್ಲದೆ ಹುಲಿಯ ಮುಂದೆ ಧೈರ್ಯದಿಂದ ಎದ್ದು ನಿಲ್ಲುತ್ತದೆ. ಹುಲಿ ಹತ್ತಿರ ಬರುತ್ತಿದ್ದಂತೆ, ಕರಡಿ ತನ್ನ ದೇಹವನ್ನು ಎರಡು ಬಾರಿ ಅಲ್ಲಾಡಿಸಿತು. ಇದನ್ನು ನೋಡಿ ಹುಲಿ ಹೆದರಿದಂತೆ ತೋರುತ್ತಿತ್ತು. ಆಗ ಕರಡಿ ಇನ್ನೂ ಜೋರಾಗಿ ಘರ್ಜಿಸುತ್ತದೆ. ಆಗ.. ಹುಲಿ ನಿಧಾನವಾಗಿ ಹಿಂದೆ ಸರಿದು ಕೊನೆಗೆ ಅಲ್ಲಿಂದ ಓಡಿಹೋಗುತ್ತದೆ.

ಕರಡಿಯ ಧೈರ್ಯ ಮತ್ತು ಹೋರಾಟದ ಮನೋಭಾವವನ್ನು ನೆಟಿಜನ್‌ಗಳು ಪ್ರಶಂಸಿಸುತ್ತಿದ್ದಾರೆ. ಕ್ರೂರ ಹುಲಿಯನ್ನು ನಿರ್ಭಯವಾಗಿ ಕರಡಿ ಎದುರಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ, ಅಲ್ಲಿಂದ ಕಾಲ್ಕಿತ್ತುವಂತೆ ಮಾಡುತ್ತದೆ. ಸಾಮಾನ್ಯವಾಗಿ ಕಾಡಿನಲ್ಲಿ ಹುಲಿಗಳನ್ನು ಕಂಡರೆ ಬಹುತೇಕ ಪ್ರಾಣಿಗಳು ಹೆದರಿ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ. ಸಿಂಹಗಳ ನಂತರ ಹುಲಿಗೆ ಎರಡನೇ ಸ್ಥಾನವಿದೆ. ಅಂತಹ ಟೈಗರ್‌.. ಸಾಮಾನ್ಯ ಕರಡಿಯ ಘರ್ಜನೆಗೆ ಹೆದರಿ ಓಡುವುದನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

You may also like