Bank Holiday: ಮೇ ತಿಂಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಬ್ಯಾಂಕ್ ಗಳಿಗೆ ಒಟ್ಟು 12 ದಿನ ರಜೆ(Bank Holiday) ಇರಲಿದೆ. ರಜೆಯ ಕುರಿತು RBI ಪಟ್ಟಿ ಬಿಡುಗಡೆ ಮಾಡಿದೆ. ಹೀಗಾಗಿ ನೀವು ಯಾವುದಾದರಾ ಪ್ರಮುಖ ಬ್ಯಾಂಕ್ ಕೆಲಸಗಳಿದ್ದರೆ, ಬ್ಯಾಂಕ್‌ಗೆ ತೆರಳುವ ಮೊದಲು ಬ್ಯಾಂಕ್ ರಜಾ ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ.
ಮೇ-2025ರ ಬ್ಯಾಂಕ್ ರಜಾದಿನಗಳುಮೇ 1 (ಗುರುವಾರ): ಮಹಾರಾಷ್ಟ್ರ ದಿನಾಚರಣೆ, ಕಾರ್ಮಿಕರ ದಿನಾಚರಣೆ. ಈ ದಿನದಂದು ಬೇಲಾಪುರ, ಬೆಂಗಳೂರು, ಚೆನ್ನೈ, ಗುವಾಹಟಿ, ಹೈದರಾಬಾದ್ (ಆಂಧ್ರ ಪ್ರದೇಶ) ಇಂಫಾಲ್, ಕೊಚ್ಚಿ, ಕೋಲ್ಕತ್ತಾ, ಮುಂಬೈ, ನಾಗ್ಪುರ, ಪಣಜಿ, ಪಾಟ್ನ, ತಿರುವನಂತಪುರದಲ್ಲಿ ಬ್ಯಾಂಕ್ ಬಂದ್ ಇರುತ್ತದೆ.
ಮೇ 9 (ಶುಕ್ರವಾರ): ರವೀಂದ್ರನಾಥ್ ಟ್ಯಾಗೋರ್ ಜನ್ಮದಿನ. ಈ ದಿನದಂದು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್‌ಗಳಿಗೆ ರಜೆ ನೀಡಲಾಗುತ್ತದೆ.
ಮೇ 12 (ಸೋಮವಾರ): ಬುದ್ಧ ಪೂರ್ಣಿಮಾ ನಿಮಿತ್ ಬ್ಯಾಂಕ್ ರಜೆ. ಅರ್ಗತಲಾ, ಐಜಾಲ್, ಬೋಪಾಲ್, ಡೆಹರಾಡೂನ್, ಇಟಾನಗರ,ಮ ಜಮ್ಮು, ಕಾನ್ಪುರ, ಕೋಲ್ಕತ್ತಾ, ಶಿಮ್ಲಾ, ನವದೆಹಲಿಯಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ
ಮೇ 16 (ಶುಕ್ರವಾರ): ಸಿಕ್ಕಿಂ ರಾಜ್ಯ ದಿವಸ. ಈ ದಿನದಂದು ಸಿಕ್ಕಿಂನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಮೇ 26 (ಸೋಮವಾರ): ಖಾಜಿ ನಜರೂಲ್ಲಾ ಜನ್ಮದಿನ. ಈ ದಿವಸದಂದು ತ್ರಿಪುರದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಮೇ 29 (ಗುರುವಾರ): ಮಹಾರಾಣಾ ಪ್ರತಾಪ್ ಜಯಂತಿ. ಈ ದಿನದಂದು ಹಿಮಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
4 ಭಾನುವಾರ ಮತ್ತು 2 ಶನಿವಾರಮೇ 4, ಮೇ 11, ಮೇ 18 ಮತ್ತು ಮೇ 25ರಂದು ಭಾನುವಾರ ಆಗಿದ್ದು, ದೇಶದಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಮೇ 10 ಮತ್ತು ಮೇ 24ರಂದು ಎರಡು ಮತ್ತು ನಾಲ್ಕನೇ ಶನಿವಾರವಾಗಿದ್ದು, ಈ ದಿನವೂ ಬ್ಯಾಂಕ್‌ಗಳು ದೇಶದಲ್ಲಿ ಮುಚ್ಚಲ್ಪಟ್ಟಿರುತ್ತವೆ.
