Home » Chikkaballapura: ಮಗುವಿನ ಎದುರೇ ನೇಣಿಗೆ ಶರಣಾದ ತಾಯಿ!

Chikkaballapura: ಮಗುವಿನ ಎದುರೇ ನೇಣಿಗೆ ಶರಣಾದ ತಾಯಿ!

0 comments

Chikkaballapura: ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗುವಿನ ಎದುರೇ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ನಗರದ ಸಿಎಂಸಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಝಾನ್ಸಿ (23) ಆತ್ಮಹತ್ಯೆಗೆ ಶರಣಾದ ಮಹಿಳೆ. ಈಕೆಯ ಪತಿ ಈಶ್ವರ್‌ ಕ್ರೇನ್‌ ಅಪರೇಟರ್‌ ಉದ್ಯೋಗ ಮಾಡುತ್ತಿದ್ದು, ಮನೆಗೆ ಊಟಕ್ಕೆಂದು ಬಂದಾಗ ಪತ್ನಿ ಆತ್ಮಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಚಿಕ್ಕಬಳ್ಳಾಪುರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕೇಸು ದಾಖಲಾಗಿದೆ.

You may also like