Home » Namaz in Bus: ಕರ್ತವ್ಯದ ವೇಳೆ ಮಾರ್ಗಮಧ್ಯೆ ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ್ದ ಚಾಲಕ ಕಾರ್ಮಿಕ ದಿನದಂದೇ ಸಸ್ಪೆಂಡ್‌!

Namaz in Bus: ಕರ್ತವ್ಯದ ವೇಳೆ ಮಾರ್ಗಮಧ್ಯೆ ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ್ದ ಚಾಲಕ ಕಾರ್ಮಿಕ ದಿನದಂದೇ ಸಸ್ಪೆಂಡ್‌!

0 comments

Namaz in Bus: ಕರ್ತವ್ಯದ ವೇಳೆ ಮಾರ್ಗಮಧ್ಯೆ ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ್ದ ಚಾಲಕ ಎ.ಆರ್.‌ಮುಲ್ಲಾನನ್ನು ಕಾರ್ಮಿಕ ದಿನಾಚರಣೆಯಂದೇ ಅಮಾನತು ಮಾಡಲಾಗಿದೆ. ಹಾನಗಲ್‌ ಘಟಕದ ಚಾಲಕ ಎ.ಆರ್‌.ಮುಲ್ಲಾ ಕೆಲಸದ ಸಮಯದಲ್ಲಿ ರಸ್ತೆ ಪಕ್ಕ ಬಸ್ಸನ್ನು ನಿಲ್ಲಿಸಿ ನಮಾಜ್‌ ಮಾಡಿದ್ದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಕರ್ತವ್ಯಲೋಪ ಆರೊಪದಲ್ಲಿ ಚಾಲಕ ಎ.ಆರ್.ಮುಲ್ಲಾನನ್ನು ಅಮಾನತು ಮಾಡಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿಸ್ತುಪಾಲನೆ ಅಧಿಕಾರಿ ಇಂದು (ಮೆ.01) ರಂದು ಆದೇಶ ಹೊರಡಿಸಿರುವ ಕುರಿತು ವರದಿಯಾಗಿದೆ.

ವಿಚಾರಣೆ ಮುಗಿಯುವವರೆಗೂ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಮಂಗಳವಾರ ಈ ಘಟನೆ ನಡೆದಿದ್ದು, ಹುಬ್ಬಳ್ಳಿ-ಹಾವೇರಿ ನಡುವೆ ಪ್ರಯಾಣ ಮಾಡುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು ಇದ್ದಕ್ಕಿದ್ದಂತೆ ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ಚಾಲಕ ಬಸ್‌ನೊಳಗೆ ನಮಾಜ್‌ ಮಾಡಿದ್ದಾನೆ. ಕಂಡಕ್ಟರ್‌ ಇದಕ್ಕೆ ವಿರೋಧ ವ್ಯಕ್ತಪಡಿಸದೇ ಆತ ಕೂಡಾ ಚಾಲಕನಿಗೆ ಬೆಂಬಲ ನೀಡಿದ್ದಾನೆ.

ಪ್ರತಿ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿದೆ. ಆದರೆ ಸಾರ್ವಜನಿಕ ಸೇವೆಯಲ್ಲಿರುವವರು ಕರ್ತವ್ಯ ವೇಳೆ ಹೊರತುಪಡಿಸಿ ತಮ್ಮ ಧರ್ಮವನ್ನು ಪಾಲಿಸಬಹುದಾಗಿದೆ. ಕರ್ತವ್ಯದ ಸಮಯದಲ್ಲಿ ಮಾರ್ಗ ಮಧ್ಯೆ ಬಸ್‌ ನಿಲ್ಲಿಸಿ ನಮಾಜ್‌ ಮಾಡುವುದು ಆಕ್ಷೇಪಾರ್ಹ. ಸೂಕ್ತ ತನಿಖೆ ನಡೆಸಿ, ಸಿಬ್ಬಂದಿ ತಪ್ಪು ಮಾಡಿದ್ದರೆ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಮಲಿಂಗರೆಡ್ಡಿ ಆದೇಶ ನೀಡಿದ್ದರು.

You may also like