Home » ಯುದ್ಧದಿಂದ ನಮ್ಮ ಸೈನಿಕರೇ ಸಾಯೋದು ಅಂದು ಘೋಷಿಸಿಬಿಟ್ಟ ನಟಿ ರಮ್ಯಾ

ಯುದ್ಧದಿಂದ ನಮ್ಮ ಸೈನಿಕರೇ ಸಾಯೋದು ಅಂದು ಘೋಷಿಸಿಬಿಟ್ಟ ನಟಿ ರಮ್ಯಾ

0 comments
Ramya

Bangalore : ಯುದ್ಧದಿಂದ ನಮ್ಮ ಸೈನಿಕರೇ ಸಾಯೋದು ಎಂದು ನಟಿ ರಮ್ಯಾ ಅನ್ನುವ ಹೇಳಿಕೆ ನೀಡಿ ಬಿಟ್ಟಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೈಯಕ್ತಿಕವಾಗಿ ಹಿಂಸೆ ಮಾಡೋದನ್ನು ನಾನು ಇಷ್ಟಪಡಲ್ಲ. ಯುದ್ಧ ಬೇಡ, ಯುದ್ಧ ಮಾಡೋದ್ರಿಂದ ಯಾರೂ ಉದ್ಧಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧನೇ ಉತ್ತರ ಅಲ್ಲ, ಇದರಿಂದ ನಮ್ಮ ಸೈನಿಕರೇ ಸಾಯೋದು ಎಂದಿದ್ದಾರೆ.

ನಾವು ನಾಯಕರನ್ನು ಎಲೆಕ್ಟ್ ಮಾಡೋದು ನಮ್ಮ ರಕ್ಷಣೆ ಮಾಡಲಿ ಅಂತ ಅಲ್ವಾ. ಇನ್ನೊಂದು ಸಲ ಈ ಥರ ನಡೆಯದೇ ಇರೋ ಹಾಗೇ ನೋಡಿಕೊಳ್ಳಬೇಕು ಅಂತ ತಾನೇ ನಾವು ನಾಯಕರನ್ನು ಆಯ್ಕೆ ಮಾಡೋದು. ಪಹಲ್ಗಾಮ್ ದಾಳಿಗೆ ಗುಪ್ತಚರ ವೈಫಲ್ಯ ಹಾಗೂ ಭದ್ರತಾ ಉಲ್ಲಂಘನೆನೇ ಕಾರಣ. ಉಗ್ರರು ಒಳಗೆ ಹೇಗೆ ಬಂದ್ರು, ಹೀಗೆ ಆಗಲು ಏನು ಕಾರಣ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು.

ಪ್ರಧಾನಿ ನರೇಂದ್ರ ಮೋದಿಯವರ ಮುಂದಿನ ನಿರ್ಧಾರ ಏನಿರಬಹುದು ಎಂದು ನಿಜವಾಗಲೂ ಯಾರಿಗೂ ಗೊತ್ತಿಲ್ಲ. ನಾವು ಇಲ್ಲಿ ಇದ್ದೀವಿ, ಇದರ ಬಗ್ಗೆ ಕಾಮೆಂಟ್ ಮಾಡೋದು ಸುಲಭ. ಆದರೆ ಅಲ್ಲಿದ್ದವರಿಗೆ ಒಳಗೆ ಏನೆಲ್ಲಾ ರಾಜಕೀಯ ನಡೆಯುತ್ತಿದೆ ಎಂದು ಗೊತ್ತಿರುತ್ತದೆ. ಹಾಗಾಗಿ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂತ ನೋಡಬೇಕು ಎಂದರು. ಈಗ ಸರ್ಕಾರದವರು ಏನು ರಿಯಾಕ್ಷನ್ ತೆಗೆದುಕೊಳ್ತಾರೆ ಅಂತ ನೋಡಬೇಕು ಅಂತ ಕಾದು ನೋಡಬೇಕು ಎಂದಿದ್ದಾರೆ.

You may also like