Home » Dakshina Kannada: Dakshina Kannada: ಸುಹಾಸ್‌ ಹತ್ಯೆ ಪ್ರಕರಣ; ಪೊಲೀಸರಿಗೆ ದೊರಕಿದೆ ಮಹತ್ವದ ಸಾಕ್ಷ್ಯ

Dakshina Kannada: Dakshina Kannada: ಸುಹಾಸ್‌ ಹತ್ಯೆ ಪ್ರಕರಣ; ಪೊಲೀಸರಿಗೆ ದೊರಕಿದೆ ಮಹತ್ವದ ಸಾಕ್ಷ್ಯ

0 comments

Dakshina Kannada: ಬಜಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕಿನ್ನಿಮಜಲಿ ಬಳಿ ಸುಹಾಸ್‌ ಶೆಟ್ಟಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದು ಕೃತ್ಯ ಎಸಗಲು ತಂದಿದ್ದ ಬಟನ್‌ ಡ್ರ್ಯಾಗರನ್ನು ಬಳಸಿದ್ದು, ಪರಾರಿಯಾಗುವಾಗ ಆರೋಪಿಗಳು ಅದನ್ನು ಘಟನಾ ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್‌ ಕಾರು ಪತ್ತೆಯಾಗಿದೆ. ಕಾರಿನೊಳಗೆ 2 ತಲ್ವಾರ್‌ ಪತ್ತೆಯಾಗಿದೆ. ಬಜ್ಪೆ ಪೊಲೀಸರು ಕಾರನ್ನು ವಶಕ್ಕೆ ಪಡೆದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪೊಲೀಸರು ಕೃತ್ಯ ನಡೆದ ಘಟನಾ ಸ್ಥಳವನ್ನು ಪರಿಶೀಲನೆ ಮಾಡುವಾಗ ಈ ಬಟನ್‌ ಡ್ರ್ಯಾಗರ್‌ ಪತ್ತೆಯಾಗಿದೆ. ಇದು ಈ ಕೊಲೆ ಕೃತ್ಯದ ಪ್ರಮುಖ ಸಾಕ್ಷ್ಯವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ಪತ್ತೆ ಕಾರ್ಯ ತೀವ್ರಗೊಂಡಿದೆ.

You may also like