Home » Udupi: ಬಸ್ಸಿಗೆ ಕಲ್ಲು ತೂರಾಟ; ಉಡುಪಿ-ಮಂಗಳೂರು ಬಸ್‌ ಸಂಚಾರ ಸ್ಥಗಿತ!

Udupi: ಬಸ್ಸಿಗೆ ಕಲ್ಲು ತೂರಾಟ; ಉಡುಪಿ-ಮಂಗಳೂರು ಬಸ್‌ ಸಂಚಾರ ಸ್ಥಗಿತ!

0 comments

Udupi: ಬೆಳಗ್ಗೆ 5.30ಕ್ಕೆ ಉಡುಪಿಯಿಂದ ಹೊರಟ ಎರಡು ಬಸ್‌ಗಳಿಗೆ ಮಂಗಳೂರಿನಲ್ಲಿ ಕಲ್ಲು ತೂರಾಟ ನಡೆದಿರುವ ಕಾರಣ ಉಡುಪಿಯಿಂದ ಮಂಗಳೂರು ಕಡೆಗೆ ಸಂಚರಿಸುವ ಬಸ್‌ಗಳನ್ನು ಸ್ಥಗಿತ ಮಾಡಲಾಗಿದೆ. ಕಾರ್ಕಳದಿಂದ ಮಂಗಳೂರಿಗೆ ಸಂಚರಿಸುವ ಬಸ್‌ ಸಂಚಾರ ಸ್ಥಗಿತಗೊಂಡಿದೆ.

ಇದರಿಂದ ಸಾರ್ವಜನಿಕರು ಉಡುಪಿ ಬಸ್‌ ನಿಲ್ದಾಣದಲ್ಲಿ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಬಸ್‌ ಓಡಿಸದಿರಲು ರಾಜ್ಯ ಬಸ್‌ ಮಾಲಕರ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ನಿರ್ಧರಿಸಿದ್ದಾರೆ.

ಉಡುಪಿ ಮೂಲಕ ಹೊರಟ ಕೆಎಸ್ಸಾರ್ಟಿಸಿ ಬಸ್‌ಗಳಿಗೂ ಕಲ್ಲು ತೂರಾಟ ನಡೆದ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಟ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದು ವರದಿಯಾಗಿದೆ.

You may also like