8
Sadananda Gowda: ಜಮೀರ್ ಪಾಕಿಸ್ತಾನಕ್ಕೆ ಹೋಗಿ ಸೂಸೈಡ್ ಬಾಂಬರ್ ಆಗುವುದು ಬೇಡ. ತಮ್ಮ ಕ್ಷೇತ್ರದಲ್ಲಿಯೇ ಸೂಸೈಡ್ ಬಾಂಬರ್ ಆಗಿ ಆತ್ಮಾಹುತಿ ಮಾಡಿಕೊಳ್ಳಲಿ ಎಂದು ಸಚಿವ ಜಮೀರ್ ಅಹ್ಮದ್ ವಿರುದ್ಧ ಮಾಜಿ ಸಿಎಂ ಸದಾನಂದ ಗೌಡ ಹೇಳಿದ್ದಾರೆ.
ಪ್ರಧಾನಿ ಮೋದಿ, ಅಮಿತ್ ಶಾ ಅವಕಾಶ ಕೊಟ್ಟರೆ ಸೂಸೈಡ್ ಬಾಂಬ್ ಹಾಕಿ ಪಾಕಿಸ್ತಾನಕ್ಕೆ ಹೋಗುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ, ಸದಾನಂದ ಗೌಡ ಅವರು ವ್ಯಂಗ್ಯವಾಗಿ, ʼನಮ್ಮ ಭಾಗದಲ್ಲಿ ಯಕ್ಷಭಾಗಕ್ಕೆ ಮೊದಲು ಒಬ್ಬ ಹಾಸ್ಯಗಾರ ಬರುತ್ತಾರೆ. ಜನರನ್ನು ರಂಜಿಸಲು ಅವರು ಬರುತ್ತಾರೆ. ಆ ಹಾಸ್ಯಗಾರರಿಗಿಂತ ಕೆಳಗೆ ಇರುವವರು ಈ ಜಮೀರ್ʼ ಎಂದು ಹೇಳಿದ್ದಾರೆ.
ಅವರ ಕ್ಷೇತ್ರದಲ್ಲಿ ಆತ್ಮಾಹುತಿ ಬಾಂಬರ್ ಆಗಲಿ. ಜಮೀರ್ ಪಾಕಿಸ್ತಾನದ ವಿರುದ್ಧ ಆತ್ಮಾಹುತಿ ಬಾಂಬರ್ ಆದರು ಎಂದು ಜಗತ್ತಿಗೆ ಒಂದು ಸಂದೇಶ ಹೋಗಲಿ. ಮನರಂಜನೆಗೆ ಮಾತನಾಡುವುದು ಬೇಡ ಎಂದು ಹೇಳಿದರು.
