Home » Police: 20 ರೂಪಾಯಿಗೆ ಕೆಲಸ ಕಳೆದುಕೊಂಡ ಪೊಲೀಸರು!

Police: 20 ರೂಪಾಯಿಗೆ ಕೆಲಸ ಕಳೆದುಕೊಂಡ ಪೊಲೀಸರು!

0 comments

Police: ಉತ್ತರ ಪ್ರದೇಶದ ಹಾರ್ದೋಯಿ ಜಿಲ್ಲೆಯ ಪಿಹಾನಿ ಎಂಬ ಪೊಲೀಸ್‌ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.

ಕಾನ್‌ಸ್ಟೇಬಲ್‌ ಅಂಕಿತ್ ಕುಮಾರ್ ಮತ್ತು ಅನುಜ್ ಕುಮಾರ್ ಒಂದು ಅಂಗಡಿಗೆ ಹೋಗಿ ಕಲ್ಲಂಗಡಿ ತಿಂದು, ಹಣ ಕೊಡದೇ ಹಿಂದಿರುಗುವಾಗ ಅವರನ್ನು ಕಂಡ ಅಂಗಡಿ ಮಾಲೀಕ 20 ರೂಪಾಯಿ ಕೊಡಿ ಎಂದು ಕೇಳಿದ್ದಾನೆ. ಆದ್ರೆ ಪೊಲೀಸರು ಕಲ್ಲಂಗಡಿಯ ಕಾಸು ಕೊಟ್ಟಿಲ್ಲ.

ಅದಕ್ಕಾಗಿ ಅಂಗಡಿ ಮಾಲೀಕ ಲಖ್‌ಪತ್ ಪೊಲೀಸರ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ, ಪ್ರಕರಣದ ತನಿಖೆ ನಡೆಸಿದ್ದಾರೆ. ಆರೋಪ ಸಾಬೀತಾದ ಬೆನ್ನಲ್ಲೇ ಕಾನ್‌ಸ್ಟೇಬಲ್‌ ಅಂಕಿತ್ ಕುಮಾ‌ರ್ ಮತ್ತು ಅನುಜ್ ಕುಮಾರ್‌ರನ್ನು ಅಮಾನತು ಮಾಡಿದ್ದಾರೆ.

You may also like