9
Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಗ್ಗೆಅವರ ಮೇಲೆ ಜೈಲಿನಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹೌದು, ಇಮ್ರಾನ್ ಖಾನ್ ಬಂಧಿಯಾಗಿರುವ ಜೈಲಿನಲ್ಲಿ ಮೇಲಧಿಕಾರಿಯೊಬ್ಬರು ಖಾನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗುತ್ತಿದ್ದು, ಅವರ ಲ್ಯಾಬ್ ರಿಪೋರ್ಟ್ ಕೂಡಾ ವೈರಲ್ ಆಗಿದೆ. ದಾಖಲೆಯಲ್ಲಿ ರೋಗಿಯ ಹೆಸರು ಇಮ್ರಾನ್ ಅಹ್ಮದ್ ಖಾನ್ ನಿಯಾಜಿ ಎಂದು ಬರೆಯಲಾಗಿದೆ.
ಅಲ್ಲದೆ ಅದರಲ್ಲಿ “ಅಸ್ಥಿರ (ಹೈಪೋಟೆನ್ಷನ್, ಟಾಕಿಕಾರ್ಡಿಯಾ), ಇತ್ತೀಚಿನ ದೈಹಿಕ ಹಲ್ಲೆಯ ಪುರಾವೆಗಳು (ಎಕಿಮೋಸ್, ಸವೆತಗಳು) ಪತ್ತೆಯಾಗಿವೆ ಎಂದು ಬರೆಯಲಾಗಿದೆ. ವರದಿಯಲ್ಲಿ “ಜನನಾಂಗದ ಪರೀಕ್ಷೆ”ಯ ವಿಚಾರವನ್ನೂ ಉಲ್ಲೇಖ ಮಾಡಲಾಗಿದ್ದು, ಖಾನ್ರವರಿಗೆ ಪೆರಿನಿಯಲ್ ಎಕಿಮೋಸಿಸ್ ಮತ್ತು ಊತ ಇದೆ ಎಂದು ಉಲ್ಲೇಖಿಸಲಾಗಿದೆ.
