6
Rajathan: ಪಾಕಿಸ್ತಾನದ ಅರೆಸೇನಾ ಪಡೆ ಪಾಕಿಸ್ತಾನಿ ರೇಂಜರ್‌ನ ಸೈನಿಕನೊಬ್ಬನನ್ನು ಅಂತಾರಾಷ್ಟ್ರೀಯ ಗಡಿಯಲ್ಲಿ ವಶಕ್ಕೆ ಪಡೆಯಲಾಗಿದೆ. ರಾಜಸ್ಥಾನದ ಗಡಿಯಲ್ಲಿ ಬಿಎಸ್‌ಎಫ್ ಗಸ್ತು ವೇಳೆ ಅಕ್ರಮವಾಗಿ ಗಡಿ ನುಸುಳಿ ಬಂದ ಪಾಕ್ ಸೈನಿಕನನ್ನು ಸೆರೆಹಿಡಿಯಲಾಗಿದೆ.
ಆತನ ಗುರುತನ್ನು ಬಿಎಸ್‌ಎಫ್ ಬಹಿರಂಗಪಡಿಸಿಲ್ಲ. ಆದರೆ, ತೀವ್ರ ವಿಚಾರಣೆಗೆ ಒಳಪಡಿಸ ಲಾಗಿದೆ. ಏ.23ರಂದು ಬಿಎಸ್ಎಫ್ ಯೋಧ ಪೂರ್ಣಂ ಕುಮಾರ್ ಶಾ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ ಪರಿಣಾಮ ಪಾಕ್ ಸೈನಿಕರ ವಶಕ್ಕೆ ಸಿಕ್ಕಿದ್ದರು. ರಾಜತಾಂತ್ರಿಕ ಮಾರ್ಗದಲ್ಲಿ ಹಲವು ಬಾರಿ ಒತ್ತಡ ಹೇರಿದರೂ ಕೂಡ ಭಾರತೀಯ ಯೋಧನ ಬಿಡುಗಡೆಗೆ ಪಾಕ್ ಸೇನೆ ನಿರಾಕರಿಸಿದೆ
