Home » Suhas Shetty Murder Case: ಸುಹಾಸ್‌ ಶೆಟ್ಟಿ ಹತ್ಯೆ – ಪ್ರಕರಣ ಎನ್‌ಐಎಗೆ ನೀಡಲು ಪೋಷಕರ ಆಗ್ರಹ!

Suhas Shetty Murder Case: ಸುಹಾಸ್‌ ಶೆಟ್ಟಿ ಹತ್ಯೆ – ಪ್ರಕರಣ ಎನ್‌ಐಎಗೆ ನೀಡಲು ಪೋಷಕರ ಆಗ್ರಹ!

0 comments

Mangalore: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದಿಂದ ಕಂಗೆಟ್ಟಿರುವ ಕುಟುಂಬದವರು ನ್ಯಾಯ ಕೊಡಿಸುವಂತೆ ಆಗ್ರಹ ಮಾಡಿದ್ದಾರೆ. ಪ್ರಕರಣದ ತನಿಖೆಯನ್ನು ಎನ್‌ಐಎ ಗೆ ನೀಡುವಂತೆ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಪ್ರಕರಣವನ್ನು ಭೇದಿಸಿರುವ ಮಂಗಳೂರಿನ ಪೊಲೀಸರು ಎಂಟು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಸುಹಾಸ್‌ ಶೆಟ್ಟಿಯನ್ನು ಹತ್ಯೆ ಮಾಡಿ ಎಲ್ಲಾ ಆರೋಪಿಗಳಿಗೆ ಮರಣದಂಡನೆ ನೀಡಬೇಕೆಂದು ತಾಯಿ ಸುಲೋಚನ ಶೆಟ್ಟಿ ಆಗ್ರಹ ಮಾಡಿದ್ದಾರೆ.

ರಾಜ್ಯ ಸರಕಾರದಲ್ಲಿ ನಮಗೆ ನಂಬಿಕೆ ಇಲ್ಲ. ಎನ್‌ಐಎ ತನಿಖೆ ನಡೆಸಬೇಕೆಂದು ಒತ್ತಾಯ ಮಾಡಿದ್ದಾರೆ.

ನನ್ನ ಮಗನಿಗೆ ಪೊಲೀಸರು ತೊಂದರೆ ನೀಡಿದ್ದಾರೆ. ಈ ರೀತಿ ಆಗಲು ಬಜ್ಪೆ ಪೊಲೀಸರೇ ಕಾರಣ. ಅವರೂ ಹತ್ಯೆಯಲ್ಲಿ ಶಾಮೀಲಾಗಿದ್ದಾರೆ. ಪೊಲೀಸರು ಕೆಲ ದಿನಗಳಿಂದ ಕಿರುಕುಳ ಹೆಚ್ಚಿಸಿದ್ದು, ವಾಹನ ತಪಾಸಣೆ ಮಾಡುತ್ತಿದ್ದರು. ಏನಾದರೂ ನಾವು ಹೇಳಿದಂತೆ ಕೇಳದಿದ್ದರೆ ಕಾಲಿಗೆ ಗುಂಡು ಹಾಕುತ್ತೇವೆ ಎಂದು ಹೆದರಿಸಿದ್ದರು ಎಂದು ಆರೋಪ ಮಾಡಿದ್ದಾಗಿ ಪಬ್ಲಿಕ್‌ ಟಿವಿ ಮಾಧ್ಯಮಕ್ಕೆ ಹೇಳಿರುವುದಾಗಿ ವರದಿಯಾಗಿದೆ.

ಕೆಲವರು ನನ್ನ ಮಗನನ್ನು ರೌಡಿ ಶೀಟರ್ ಎಂದು ಬಿಂಬಿಸುತ್ತಿದ್ದಾರೆ. ಅವನು ರೌಡಿಶೀಟರ್ ಆಗಿದ್ದರೆ ನಮ್ಮ ಮನೆ ಹೀಗೆ ಇರುತ್ತಿತ್ತಾ? ನನ್ನ ಪತ್ನಿಗೆ ಕ್ಯಾನ್ಸರ್ ಚಿಕಿತ್ಸೆ ನೀಡಲು ಪರದಾಡುತ್ತಿದ್ದೇವೆ. ನಮ್ಮ ಹೆಸರಿನಲ್ಲಿ ಸಾಲ ಮಾಡಿ ಅವನ ವ್ಯವಹಾರಕ್ಕೆ ಸಹಾಯ ಮಾಡಿದ್ದೆ. ಮಂಗಳೂರಿನಲ್ಲಿ ಮರಳಿನ ವ್ಯವಹಾರ ಮಾಡುತ್ತಿದ್ದ. ಮನೆಗೆ ಆಧಾರ ಸ್ಥಂಭವಾಗಿದ್ದ ಮಗನನ್ನು ಕಳೆದುಕೊಂಡ ನಮಗೆ ನ್ಯಾಯ ಬೇಕಾಗಿದೆ ಎಂದು ಸುಹಾಸ್‌ ಶೆಟ್ಟಿ ತಂದೆ ಆಗ್ರಹಿಸಿದ್ದಾರೆ.

You may also like