8
Bengaluru : ಬೆಂಗಳೂರಿನ ನಡು ರಸ್ತೆಯಲ್ಲಿ ಪಿಜಿ ವಿದ್ಯಾರ್ಥಿನಿ ಒಬ್ಬಳು ಬೆತ್ತಲೆಯಾಗಿ ಓಡಾಡಿದ ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ ಈ ಕುರಿತ ವಿಡಿಯೋ ಇಲ್ಲೆ ವೈರಲ್ ಕೂಡ ಆಗಿದೆ.
ಹೌದು, ನಗರದ ಎಚ್ಎಸ್ಆರ್ ಬಡಾವಣೆಯ ರಸ್ತೆಯಲ್ಲಿ ಯುವತಿಯೊಬ್ಬಳು ನಗ್ನವಾಗಿ ಓಡಾಡಿರುವ ವಿಡಿಯೊವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ. .ಜಿ.ಯೊಂದರಲ್ಲಿ ವಾಸವಿರುವ ಯುವತಿ ಜನನಿಬಿಡ ರಸ್ತೆಯಲ್ಲಿ ಓಡಾಡುತ್ತಿರುವುದು ಆ ವಿಡಿಯೊದಲ್ಲಿದೆ. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಂತೆ ಕಾಣುತ್ತಿದೆ.
ಯುವತಿ ಎಲ್ಲಿಗೋ ಹೋಗಿ, ವಾಪಸ್ ಪಿ.ಜಿ.ಗೆ ಮರಳುತ್ತಿರುವಂತೆ ಕಾಣುತ್ತಿದೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
