6
Mangaluru: ಕನ್ನಡ ಕಿರುತೆರೆ ಹಾಗೂ ಸಿನಿಮಾದಲ್ಲಿ ಖ್ಯಾತಿ ಗಳಿಸಿರುವ ನಟಿ ಇಳಾ ವಿಟ್ಲಾ ಅವರು ಮಂಗಳೂರಿಗೆ (Mangaluru) ಬಂದು ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಅವರು ಪೂಜೆ ಸಲ್ಲಿಸಿದ ನಂತರ, ಕಳೆದುಹೋಗಿದ್ದ ಹೊಸ ಮೊಬೈಲ್ ಸಿಕ್ಕಿದ್ದಕ್ಕೆ ಇಳಾ ವಿಟ್ಲಾ ಅವರು ಈಗ ಹರಕೆ ತೀರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಕೊರಗಜ್ಜನ ಮೇಲೆ ತಮಗೆ ಇರುವ ಭಕ್ತಿ ಹಾಗೂ ನಂಬಿಕೆಯ ಬಗ್ಗೆ ಮತ್ತು ತಮ್ಮ ಬದುಕಿನಲ್ಲಿ ಕೊರಗಜ್ಜನ ಪವಾಡ ಯಾವ ರೀತಿ ನಡೆದಿದೆ ಎಂಬುದನ್ನು ಅವರು ತಿಳಿಸಿದರು.
