Home » Madikeri: ಗದಗಕ್ಕೆ ತೆರಳುತ್ತಿದ್ದ ಮಾರುತಿ ವ್ಯಾನ್ ಗೆ ಕಾಡಾನೆ ದಾಳಿ!

Madikeri: ಗದಗಕ್ಕೆ ತೆರಳುತ್ತಿದ್ದ ಮಾರುತಿ ವ್ಯಾನ್ ಗೆ ಕಾಡಾನೆ ದಾಳಿ!

0 comments

Madikeri: ಮಡಿಕೇರಿಯಿಂದ (Madikeri) ಗದಗಕ್ಕೆ ತೆರಳುತ್ತಿದ್ದ ಮಾರುತಿ ಓಮ್ನಿ ವ್ಯಾನ್ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಆನೆಕಾಡು ಹೆದ್ದಾರಿಯ ಅರಣ್ಯ ಡಿಪೋ ಸಮೀಪ ನಡೆದಿರುವ ಕುರಿತು ವರದಿಯಾಗಿದೆ.

ಮೂಲತಃ ಗದಗದವರಾದ ಶರೀಫ್ ಎಂಬುವವರು ಮಡಿಕೇರಿಯಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದು, ಊರಿನಲ್ಲಿ ನಡೆಯಲಿರುವ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾರುತಿ ಓಮ್ನಿ ವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಮಾರ್ಗಮಧ್ಯದಲ್ಲಿ ಆನೆಕಾಡು ಅರಣ್ಯ ಡಿಪೋ ಬಳಿ ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿದ್ದರಿಂದ ಶರೀಪ್ ಅವರು ವ್ಯಾನ್ ಅನ್ನು ನಿಲ್ಲಿಸಿದ್ದಾರೆ. ರಸ್ತೆ ದಾಟುತ್ತಿದ್ದ ಕಾಡಾನೆಗಳ ಪೈಕಿ ಹೆಣ್ಣಾನೆ ಇವರಿದ್ದ ವ್ಯಾನ್ ಮೇಲೆ ಎರಗಿದೆ. ಒಳಗಿದ್ದವರ ಪೈಕಿ ಶರೀಫ್ ರವರಿಗೆ ಗಂಭೀರ ಗಾಯವಾಗಿದೆ. ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಹಾಗೂ ಬಾವನವರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.

You may also like