Home » Bengaluru: ಸೋನು ನಿಗಮ್ ವಿರುದ್ಧ ಕನ್ನಡ ಸಂಘಟನೆಗಳಿಂದ ಇಂದು ಬೃಹತ್ ಪ್ರತಿಭಟನೆ!

Bengaluru: ಸೋನು ನಿಗಮ್ ವಿರುದ್ಧ ಕನ್ನಡ ಸಂಘಟನೆಗಳಿಂದ ಇಂದು ಬೃಹತ್ ಪ್ರತಿಭಟನೆ!

0 comments

Bengaluru: ಕನ್ನಡ ಭಾಷೆ ದೂಷಿಸಿದ ಪರಭಾಷಾ ಗಾಯಕ ಸೋನು ನಿಗಮ್ ಆಡಿರುವ ಮಾತುಗಳು ಕನ್ನಡಿಗರ ತಾಳ್ಮೆ ಪರೀಕ್ಷಿಸಿವೆ. ಈ ಹಿನ್ನೆಲೆಯಲ್ಲಿ ಇಂದು ಕನ್ನಡ ಹೋರಾಟಗಾರರು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಬೆಂಗಳೂರಿನ ( Bengaluru) ಫ್ರೀಡಂ ಪಾರ್ಕ್ನನಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆಯ ಕರವೇ ನಾರಾಯಣ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಶೀಘ್ರವೇ ಸೋನು ನಿಗಮ್ ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ಹೋರಾಟದಲ್ಲಿ ಹಲವು ಕನ್ನಡ ಸಂಘಟನೆಗಳು ಪಾಲ್ಗೊಳ್ಳುತ್ತಿವೆ.

ಕನ್ನಡಪರ ಸಂಘಟನೆಯ ರೂಪೇಶ್ ರಾಜಣ್ಣ ದೂರು ನೀಡಿದ್ದು, ಜೊತೆಗೆ ಫಿಲ್ಡ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಕೂಡ ಸೋನು ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕನ್ನಡ ಸಂಘಟನೆ ದೂರಿನ ಬೆನ್ನಲ್ಲೇ ಗಾಯಕ ಸೋನು ನಿಗಮ್ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ಕೂಡ ದಾಖಲಾಗಿದೆ. BNS 351(2) ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜನ, BNS 352(1) ಕ್ರಿಮಿನಲ್ ಮಾನಹಾನಿ ಮಾಡುವುದು, BNS 353 ಧಾರ್ಮಿಕ, ಭಾಷಿಕ ಭಾವನೆ ಕೆರಳಿಸುವುದು. ಈ ಸೆಕ್ಷನ್‌ಗಳನ್ನು ದೂರಿನಲ್ಲಿ ಆಗ್ರಹಿಸಲಾಗಿದೆ. ದೂರಿನ ಬಳಿಕ ಸೋನುಗೆ ನೋಟೀಸ್ ನೀಡಲು ಪೊಲೀಸರು ಸಜ್ಜಾಗಿದ್ದಾರೆ ಎನ್ನಲಾಗಿದೆ.

You may also like