Home » NEET: 40 ಲಕ್ಷ ರೂ. ಗೆ ನೀಟ್ ಪ್ರಶ್ನೆ ಪತ್ರಿಕೆ ಮಾರಾಟ ಯತ್ನ: ಮೂವರು ಅರೆಸ್ಟ್!

NEET: 40 ಲಕ್ಷ ರೂ. ಗೆ ನೀಟ್ ಪ್ರಶ್ನೆ ಪತ್ರಿಕೆ ಮಾರಾಟ ಯತ್ನ: ಮೂವರು ಅರೆಸ್ಟ್!

0 comments

NEET: ನೀಟ್ ಅಭ್ಯರ್ಥಿಗೆ ಪ್ರಶ್ನೆ ಪತ್ರಿಕೆ ಕೊಡಿಸುವುದಾಗಿ ಹೇಳಿ ಬರೋಬ್ಬರಿ 40 ಲಕ್ಷ ರೂ. ಗಳಷ್ಟು ವಂಚನೆ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಲ್ವಾನ್ (27), ಮುಖೇಶ್ ಮೀನಾ (40) ಮತ್ತು ಹರ್ದಾಸ್ (38) ಎಂದು ಗುರುತಿಸಲಾಗಿದೆ. ವರದಿಯ ಪ್ರಕಾರ, ಮೂವರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಆರೋಪಿಗಳ ಬಳಿ ಪ್ರಶ್ನೆ ಪತ್ರಿಕೆಯನ್ನು ಕೇಳಿದ್ದರು.

ಅದರಂತೆ ಆರೋಪಿಗಳು ಮೂವರು ವಿದ್ಯಾರ್ಥಿಗಳು ಸೇರಿ ಅವರ ಪೋಷಕರನ್ನು ಪ್ರಶ್ನೆ ಪತ್ರಿಕೆ ನೀಡುವುದಾಗಿ ಗುರುಗ್ರಾಮ್‌ಗೆ ಕರೆದೊಯ್ದು ಪ್ರಶ್ನೆ ಪತ್ರಿಕೆ ನೀಡುವುದಕ್ಕೂ ಮೊದಲು ಹಣ ನೀಡುವಂತೆ ಕೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಪೋಷಕರು ಮೊದಲು ಪ್ರಶ್ನೆ ಪತ್ರಿಕೆ ತೋರಿಸುವಂತೆ ಕೇಳಿದ್ದಾರೆ.

ಆದರೆ ಇದಕ್ಕೆ ಆರೋಪಿಗಳು ಒಪ್ಪದ ಹಿನ್ನಲೆ ಕೂಡಲೇ ಪೋಷಕರು ಎಸ್‌ಒಜಿ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ತಿಳಿಸಿದರು, ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

You may also like