Home » Raichur: ಮನೆಗೆ ತಡವಾಗಿ ಬರ್ತಿದ್ದಕ್ಕೆ ಪೋಷಕರಿಂದ ಬುದ್ಧಿವಾದ- ಯುವಕ ಆತ್ಮಹತ್ಯೆ

Raichur: ಮನೆಗೆ ತಡವಾಗಿ ಬರ್ತಿದ್ದಕ್ಕೆ ಪೋಷಕರಿಂದ ಬುದ್ಧಿವಾದ- ಯುವಕ ಆತ್ಮಹತ್ಯೆ

0 comments

Raichur: ಮನೆಗೆ ತಡವಾಗಿ ಬರುತ್ತಿದ್ದ ಎನ್ನುವ ಕಾರಣಕ್ಕೆ ಪೋಷಕರು ಬೈದು ಬುದ್ಧಿವಾದ ಹೇಳಿದ್ದಕ್ಕೆ ಯುವಕನೋರ್ವ ಮನನೊಂದು ವಿದ್ಯುತ್‌ ಕಂಬಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

ಮೃತ ಯುವಕನನ್ನು ಸುದೀಪ್‌ ಕುಮಾರ್‌ (21) ಎಂದು ಗುರುತಿಸಲಾಗಿದೆ. ಈತ ಖಾಸಗಿ ಫಾರ್ಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸುದೀಪ್‌ ನಿತ್ಯ ಮನೆಗೆ ತಡವಾಗಿ ಬರುತ್ತಿದ್ದ ಇದರಿಂದ ಆತನಿಗೆ ಪೋಷಕರು ಬೈದು ಬುದ್ಧಿವಾರ ಹೇಳಿದ್ದರು. ಇದರಿಂದ ಸುದೀಪ್ ಮದ್ಯದ ಅಮಲಿನಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಕುರಿತು ಶಕ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like