Mangalore : ಮಂಗಳೂರು: ಸುಭಾಷ್ ಶೆಟ್ಟಿ ಕೊಲೆ ನಡೆಸಿ ಹಂತಕರು ಕಾರ್ನಲ್ಲಿ ಪರಾರಿಯಾಗಿದ್ದ ವೇಳೆ ಅಲ್ಲೇ ಇದ್ದು ಹಂತಕರ ಕಾರಿನ ಬಳಿ ಬಂದು ಏನೋ ಹೇಳುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದ ದೃಶ್ಯಾವಳಿ ಆಧಾರದಲ್ಲಿ ಅಲ್ಲಿದ್ದ ಇಬ್ಬರು ಬುರ್ಖಾ ಧಾರಿ ಮುಸ್ಲಿಂ ಮಹಿಳೆಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸಿಸಿ ದೃಶ್ಯಾವಳಿಯಲ್ಲಿ ಕಂಡುಬಂದ ಈ ಇಬ್ಬರು ಮಹಿಳೆಯರು ಆರೋಪಿ ನಿಯಾಜ್ ನ ಚಿಕ್ಕಮ್ಮ ಮತ್ತು ಅವರ ಮಗಳು ಎಂದು ತಿಳಿದುಬಂದಿದೆ. ಇವರಿಬ್ಬರು ಬಜ್ಪೆಯ ಫ್ಲ್ಯಾಟ್ ನಲ್ಲಿರುವ ಸಂಬಂಧಿಕರೊಬ್ಬರ ಆರೋಗ್ಯ ವಿಚಾರಣೆಗೆ ಬಂದಿದ್ದು ನಂತರ ಅಲ್ಲಿಂದ ತೆರಳುವ ವೇಳೆ ಘಟನಾ ಸ್ಥಳದಲ್ಲಿದ್ದ ಪಕ್ಕದ ಹೋಟೆಲಿನಿಂದ ಪಾರ್ಸೆಲ್ ತೆಗೆದುಕೊಂಡು ಹೊರ ಬರುತ್ತಿದ್ದoತೆ ನಿಯಾಜ್ ರಸ್ತೆಯಲ್ಲಿ ಓಡಾಡುತ್ತಿರುವುದನ್ನು ತಿಳಿದು ಮತ್ತು ರಸ್ತೆಯ ಪಕ್ಕ ಏನೋ ದುರ್ಘಟನೆ ನಡೆದಿರುವುದನ್ನು ತಿಳಿದು ನಾವು ನಿಯಾಜ್ ಬಳಿ ತೆರಳಿ ವಿಚಾರಿಸಿದ್ದಾಗಿ ಆ ಇಬ್ಬರು ಬುರ್ಖಾಧಾರಿ ಮಹಿಳೆಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಆ ಮೂಲಕ ನಿಯಾಜ್ ಆರೋಪಿ ಸ್ಥಾನದಲ್ಲಿ ಬಂದು ನಿಂತದ್ದು ಖಾತರಿಯಾಗಿದೆ.
