Home » Droupadi Murmu: ಶಬರಿಮಲೆಗೆ ಭೇಟಿ ನೀಡುತ್ತಿರುವ ಮೊದಲ ರಾಷ್ಟ್ರಪತಿ ದ್ರೌಪದಿ ಮುರ್ಮು!

Droupadi Murmu: ಶಬರಿಮಲೆಗೆ ಭೇಟಿ ನೀಡುತ್ತಿರುವ ಮೊದಲ ರಾಷ್ಟ್ರಪತಿ ದ್ರೌಪದಿ ಮುರ್ಮು!

0 comments
Droupadi murmu

Droupadi Murmu: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇ 18 ರಂದು ಶಬರಿಮಲೆಗೆ ಭೇಟಿ ನೀಡಲಿದ್ದು, ಪಂಪಾದಿಂದ ಇರುಮುಡಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿಯೇ ಬೆಟ್ಟವನ್ನು ಏರುವ ಸಾಧ್ಯತೆಯಿದೆ. ರಾಷ್ಟ್ರಪತಿಯೊಬ್ಬರು ಶಬರಿಮಲೆಗೆ ಹೋಗುತ್ತಿರುವುದು ಇದೇ ಮೊದಲು.

ರಾಷ್ಟ್ರಪತಿ ಅವರಿಗೆ 66 ವರ್ಷ ಮೇಲ್ಪಟ್ಟಿದ್ದು, ಕುಮಾರಕೋಮ್‌ನಿಂದ ಟೇಕ್‌ಆಫ್‌ ಆದ ನಂತರ ನಿಲಕ್ಕಲ್‌ನಲ್ಲಿ ಹೆಲಿಕಾಪ್ಟರ್‌ನಲ್ಲಿ ಇಳಿಯಲಿದ್ದಾರೆ. ಅವರು ಕಾರಿನಲ್ಲಿ ಪಂಪಾ ತಲುಪಿ ಇರುಮುಡಿ ಹೊತ್ತು ತೆರಳಲಿದ್ದಾರೆ. ದೇವಸ್ವಂ ಅತಿಥಿ ಗೃಹ ಅಥವಾ ಸನ್ನಿಧಾನಂನಲ್ಲಿರುವ ಶಬರಿ ಅತಿಥಿ ಗೃಹದಲ್ಲಿ ತಂಗಲಿದ್ದು, ದರ್ಶನ ಪಡೆಯುವ ಸಮಯವನ್ನು ನಿಗದಿಪಡಿಸಿಲ್ಲ.

ದ್ರೌಪದಿ ಮುರ್ಮು ಅವರು 18,19 ರಂದು ಶಬರಿಮಲೆಯಲ್ಲಿ ಇರುತ್ತಾರೆ. ಈ ತಿಂಗಳ 14 ರಂದು ಎಡವ ಮಾಸದ ಪೂಜೆಗಾಗಿ ದೇವಾಲಯದ ನಾಡ ತೆರೆಯಲಿದೆ. ರಾಷ್ಟ್ರಪತಿಗಳ ಕಚೇರಿ ಮೂಲಕ ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ಸೂಚನೆ ಬಂದಿದೆ.

You may also like